ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬರಿಮಾರು ಇಲ್ಲಿ ಶ್ರೀ ಧರ್ಮಸ್ಥಳ ಶೌರ್ಯ ಘಟಕ ಮಾಣಿ ಇದರ ಸ್ವಯಂ ಸೇವಕರು ಸ್ವಚ್ಚತಾ ಶ್ರಮದಾನ ಮತ್ತು ಅಪಾಯಕಾರಿ ಮರದ ಗೆಲ್ಲುಗಳನ್ನು ಕಡಿಯುವ ಕೆಲಸವನ್ನು ಮಾಡಿದರು.

ಶಾಲಾ ಶಿಕ್ಷಕರ ವಿನಂತಿಯ ಮೇರೆಗೆ ಶ್ರಮದಾನ ನಡೆಸಿದ ಸ್ವಯಂಸೇವಕರು ಶಾಲೆಯ ಪರಿಸರದಲ್ಲಿರುವ ಅಪಾಯಕಾರಿ ಬ್ರಹತ್ ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸಿ, ಶಾಲಾ ಸುತ್ತ ಮುತ್ತ ಪೊದೆಗಳನ್ನು ಕಡಿದು ಸ್ವಚ್ಚತೆ ಮಾಡಿದರು.
ವಲಯ ಮೇಲ್ವಿಚಾರಕರು , ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಎಸ್ ಡಿ ಎಂ ಸಿ ಅದ್ಯಕ್ಷರು , ಸದಸ್ಯರು, ಸ್ಥಳೀಯ ಸೇವಪ್ರತಿನಿದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಘಟಕದ ಸದಸ್ಯರಾದ ಸುಗಂಧಿನಿ , ಸತೀಶ್ ಬಾಲಕೃಷ್ಣ,ದಿವಾಕರ,ಅಜಿತ್ ಕುಮಾರ್, ಚಂದ್ರಹಾಸ ನಾಯ್ಕ, ಹರಿಶ್ಚಂದ್ರ ಆಚಾರ್ಯ, ವೆಂಕಟರಮಣ, ನೀಲಪ್ಪ ಪಾಲ್ಗೊಂಡರು.