ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಸುತ್ತಮುತ್ತ ಹಾಗೂ ಎಂಡೋಸಲ್ಫಾನ್ ಕೇಂದ್ರದ ಸುತ್ತ ಮುತ್ತ ಸ್ವಚ್ಛತೆ ಶ್ರಮದಾನ ಮಾಡಿದರು.

ವಿಟ್ಲ ತಾಲೂಕು ಯೋಜನಾಧಿಕಾರಿಯಾದ ಸುರೇಶ್ ಗೌಡ ಇವರು ಉಪಸ್ಥಿತರಿದ್ದು ಸ್ವಯಂಸೇವಕರಿಗೆ ಪ್ರೇರಣೆ ನೀಡಿದರು. ಮೇಲ್ವಿಚಾರಕರಾದ ಮಾಲತಿ ಹಾಗೂ ವೈದ್ಯಾಧಿಕಾರಿ ಡಾ. ಶಮನ್, ಜಿ, ಹಿರಿಯ ನಿರೀಕ್ಷಣಾಧಿಕಾರಿ ಕುಸುಮ, ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಸ್ಥಳೀಯ ಸೇವಾ ಪ್ರತಿನಿಧಿ ಭವ್ಯ ಉಪಸ್ಥಿತರಿದ್ದರು.
ಸ್ವಯಂಸೇವಕರಾದ ರಾಜೇಶ್, ಸೀತಾರಾಮ, ಪ್ರವೀಣ್ ಕೆ, ರವಿಚಂದ್ರ, , ಉಮೇಶ್, ಯಶೋಧ, , ದಿವಾಕರ ಶೆಟ್ಟಿ ಪದ್ಮನಾಭ ಶೆಟ್ಟಿ ವಸಂತ ರಾಜ್, ವಸಂತ ಗೌಡ ಶ್ರಮದಾನದಲ್ಲಿ ಭಾಗವಹಿಸಿದರು.