ಯಲ್ಲಾಪುರ ತಾಲ್ಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಳಗಿಮನೆಯ ಶಾಲಾ ಆವರಣದಲ್ಲಿ ಗಿಡ ನಾಟಿ ಮಾಡಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ನಡೆದ ಪರಿಸರ ಕಾರ್ಯಕ್ರಮದ ಅಡಿಯಲ್ಲಿ ಗಿಡ ನಾಟಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಗಿಡ ನಾಟಿಯಲ್ಲಿ ಪಾಲ್ಗೊಂಡರು.

ಶೌರ್ಯ ಘಟಕದ ಸದಸ್ಯರಾದ ರಾಜೀವಿ, ವಿವೇಕಾನಂದ್, ಉಮಾ ಮಹೇಶ್, ಮಹದೇವ್, ವೆಂಕಟೇಶ, ವಿನಾಯಕ, ಗಣಪತಿ, ರಾಮ, ಸಾಜಿದಮದ್, ಪರಶುರಾಮ, ಸವಿತಾ ಪಾಲ್ಗೊಂಡರು.