ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಕಡಬದ ಸ್ವಯಂಸೇವಕರು ಕೋಡಿಂಬಾಳ ಗ್ರಾಮದ ಹಿಂದೂ ರುದ್ರಭೂಮಿಯ ಸುತ್ತಮುತ್ತಲು ಸ್ವಚ್ಛತಾ ಕಾರ್ಯಕ್ರಮ ವನ್ನು ನಡೆಸಿದರು.

ರುದ್ರಭೂಮಿಯ ಪರಿಸರದಲ್ಲಿ ಹುಲ್ಲು, ಅನಗತ್ಯ ಗಿಡಗಂಟಿಗಳು ಬೆಳೆದುನಿಂತಿದ್ದವು. ಇದನ್ನು ತೆರವು ಮಾಡಲು ನಿರ್ಧರಿಸಿದ ಸ್ವಯಂಸೇವಕರು ಶ್ರಮದಾನ ಮಾಡಿದರು.
ಘಟಕದ ಸ್ವಯಂಸೇವಕರಾದ ಧನಂಜಯ,ಹರೀಶ್,ಉಮೇಶ್,ನಳಿನಿ,ಗಣೇಶ್ ವೇಣುಗೋಪಾಲ, ಲೋಕೇಶ್,ದಯಾನಂದ, ಅನಂದ ಶ್ರಮದಾನದಲ್ಲಿ ಭಾಗವಹಿಸಿದ್ದರು.

ತಾಲೂಕಿನ ಯೋಜನಾಧಿಕಾರಿಗಳಾದ ಪ್ರಕಾಶ್ ಕುಮಾರ್ ರವರು ಭೇಟಿ ನೀಡಿ ಸ್ವಯಂಸೇವಕರ ಶ್ರಮದಾನಕ್ಕೆ ಪ್ರೇರಣೆ ನೀಡಿ ಸೇವೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ವಲಯ ಮೇಲ್ವಿಚಾರಕರು, ಕಡಬ ಸ್ಥಾಯಿ ಸಮಿತಿಯ ಅಧ್ಯಕ್ಷ ರಾದ ಹಾಜಿ ಹನೀಫ್ ರವರು, ತಾಲೂಕು ಪಟ್ಟಣ ಪಂಚಾಯತ್ ಸಿಬ್ಬಂದಿ ಗಳು, ಪೌರ ಕಾರ್ಮಿಕ ರು, ಮತ್ತು ಘಟಕ ದ ಸ್ವಯಂ ಸೇವಕರು ಉಪಸ್ಥಿತರಿದ್ದರು.