ಯಾದಗಿರಿ ತಾಲ್ಲೂಕಿನ ಬಂದಳ್ಳಿ ಗ್ರಾಮದ ಹನುಮನ ದೇವಸ್ಥಾನದ ಪರಿಸರದಲ್ಲಿ ಸ್ವಚ್ಚತಾ ಶ್ರಮದಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ನಡೆಸಿದರು.

ಆಂಜನೇಯ ಸ್ವಾಮಿ ದೇವಾಲಯದಲ್ಲಿ ದಾಸೋಹದ ವ್ಯವಸ್ಥೆ ಇದ್ದುದರಿಂದ ಅದಕ್ಕೆ ಪೂರಕವಾದ ಕೆಲಸಗಳನ್ನು ಶೌರ್ಯ ತಂಡದ ಸದಸ್ಯರು ಮಾಡಿರುತ್ತಾರೆ.
ಘಟಕದ ಸದ್ಯರಾದ ಗೌರಮ್ಮ, ಸುಧಾ, ಮಹಾದೇವಮ್ಮ, ಮಾಮತ, ಭೀಮಬಾಯಿ, ಸಾಬಣ್ಣ, ಭೀಮರಾಯ, ಶೇಕಪ್ಪ, ಶಿವಪ್ಪ ಶ್ರಮದಾನದಲ್ಲಿ ಭಾಗವಹಿಸಿದ್ದರು.