ಸೇಡಂ ತಾಲ್ಲೂಕಿನ ಕಾನ ಗಡ್ಡ ಎಂಬಲ್ಲಿನ ಶ್ರೀ ಮಲಯ್ಯ ಗುಡಿ ಸ್ವಚ್ಛತಾ ಶ್ರಮದಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಮೋತಕಪಲ್ಲಿ ಸದಸ್ಯರು ನಡೆಸಿದರು.

ವಲಯದ ಮೇಲ್ವಿಚಾರಕರಾದ ಲಕ್ಷ್ಮಣ್ ರವರ ಮಾರ್ಗದರ್ಶನದಲ್ಲಿ ಶ್ರಮದಾನವನ್ನು ಸ್ವಯಂಸೇವಕರು ನಡೆಸಿರುತ್ತಾರೆ.
ಘಟಕದ ಸದಸ್ಯರಾದ ರವಿಕುಮಾರ್, ಮುಗುಲಪ್ಪ, ಮಾಮದ್, ನಾಗಪ್ಪ, ಮಲ್ಲಪ್ಪ, ಕಾಶಪ್ಪ, ಲಕ್ಷ್ಮಿ, ಮಂಜುಳಾ, ಮೋನಪ್ಪ ಇವರು ಶ್ರಮದಾನದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಘಟಕದ ಮಾಸಿಕ ಸಭೆಯನ್ನು ನಡೆಸಲಾಯಿತು.