ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬ್ರಹ್ಮಾವರ ತಾಲ್ಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ ಮಂದಾರ್ಥಿ ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ಬಸ್ ತಂಗುದಾಣ ಸ್ವಚ್ಚತೆ ಶ್ರಮದಾನ ನಡೆಸಿದರು.

ಮಂದಾರ್ಥಿ ಸಮೀಪದ ಮಾನ್ಯ ಬಸ್ ತಂಗುದಾಣದ ಸುತ್ತಲೂ ಗಿಡಗಳು ಬೆಳೆದು ಪ್ರಯಾಣಿಕರು ನಿಲ್ಲಲು ಕಷ್ಠವಾಗುತ್ತಿತ್ತು.
ಇದನ್ನು ಗಮನಿಸಿದ ಶೌರ್ಯ ತಂಡದ ಸದಸ್ಯರು ಸ್ವಚ್ಚತೆ ಶ್ರಮದಾನ ಮಾಡಿದರು.

ಘಟಕದ ಸದಸ್ಯರಾದ ಮಂಜುನಾಥ್ ಕುಲಾಲ್, ಕರುಣಾಕರ, ಗೋಪಾಲ ಆಚಾರ್ಯ, ಗಣೇಶ್ ಆಚಾರ್ಯ,ಸುರೇಶ ನಾಯ್ಕ್ ಭಾಗವಹಿಸಿದರು.