ಬೆಳ್ತಂಗಡಿ ತಾಲ್ಲೂಕಿನ ಶಿಶಿಲ ಗ್ರಾಮದ ಗುಂಡಿಕ್ಕಾಡು ನಿವಾಸಿ ಚಿನ್ನಮ್ಮ ಅವರ ಮೃತದೇಹ ಮನೆಯ ಪಕ್ಕದ ಜಮೀನಿನಲ್ಲಿರುವ ಕೆರೆಯಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಮೃತ ದೇಹ ತೆರವಿಗೆ ಸಹಕಾರ ಕೇಳಿದಾಗ ಸ್ಥಳಕ್ಕೆ ತೆರಳಿದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಕೆರೆಯಿಂದ ತೆರವು ಮಾಡಿ ಪೊಲೀಸರಿಗೆ ಒಪ್ಪಿಸಿದರು.

ಶಿಶಿಲ ಅರಶಿನಮಕ್ಕಿ ಘಟಕದ ಸ್ವಯಂಸೇವಕರಾದ ರಮೇಶ್ ಬೈರಗಟ್ಟ, ಅವಿನಾಶ್ ಬಿಡೆ, ಕೃಷ್ಣಪ್ಪ ಗೌಡ, ಸೀನಪ್ಪ ನಾಯ್ಕ, ಕಿರಣ್ ಸಂಕೇಶ, ಕುಶಾಲಪ್ಪ ಗೌಡ, ರಶ್ಮಿತಾ ಉಪಸ್ಥಿತರಿದ್ದರು.
ಸಹಕಾರ ನೀಡಿದ ಸ್ವಯಂಸೇವಕರಿಗೆ ಪೊಲೀಸರು ಕೃತಜ್ಞತೆ ಸಲ್ಲಿಸಿದರು.