ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಂಟ್ವಾಳ ತಾಲ್ಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ ವಾಮದಪದವು ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿದರು.

ತಾಲ್ಲೂಕಿನ ಕೊರಗಟ್ಟೆಯ ಕೆಮ್ಮರು -ತಾರಬರಿ ಹೋಗುವ ರಸ್ತೆ ಅಜ್ಜಿಬೆಟ್ಟು ಎಂಬಲ್ಲಿನ ರಸ್ತೆ ಬದಿಯಲ್ಲಿ ಗಿಡಗಂಟಿಗಳು, ಬಳ್ಳಿಗಳು ಬೆಳೆದು ರಸ್ತೆಯ ತಿರುವಿನಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು.
ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತೆ ಮಾಡಬೇಕೆಂದು ನಿರ್ಧರಿಸಿದ ಸ್ವಯಂಸೇವಕರು ಕೊರಗಟ್ಟೆಯ ಕೆಮ್ಮರು- ತಾರಬರಿ ಹೋಗುವ ರಸ್ತೆ ಅಜ್ಜಿಬೆಟ್ಟು ವಿನ ಸುಮಾರು ಒಂದು ಕಿಲೋಮೀಟರ್ ದೂರದ ವರೆಗೆ ಸ್ವಚ್ಚತಾ ಶ್ರಮದಾನ ನಡೆಸಿದರು.

ಘಟಕ ಪ್ರತಿನಿಧಿ ರವೀಂದ್ರ ರೈ, ಮಾದವ, ಪ್ರಕಾಶ್ ಪೂಜಾರಿ, ಸುರೇಶಶೆಟ್ಟಿ , ಚೇತನಕುಮಾರ, ತಾರಾನಾಥಶೆಟ್ಟಿ, ಪವಿತ್ರ, ಧನವತಿ,ಸವಿತಾ, ಸ್ಥಳೀಯರಾದ ಶಿವಾನಂದ, ಲೋಹಿತ್, ವಿಜಯ, ಪುಷ್ಪ,ವಿಶಾಲಾಕ್ಷಿ,, ಪುರುಷೋತ್ತಮ, ವಿಶ್ವನಾಥ, ಲಿಂಗಪ್ಪರವರು ಭಾಗವಹಿಸಿದರು.
ಶೌರ್ಯ ತಂಡದ ಈ ಸೇವೆಗೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದರು.