ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಂಟ್ವಾಳ ತಾಲ್ಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ ವಗ್ಗ ಕಾಡಬೆಟ್ಟು ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ಸ್ವಚ್ಚತಾ ಶ್ರಮದಾನ ನಡೆಸಿದರು.

ತಾಲ್ಲೂಕಿನ ವಗ್ಗ ಎಂಬಲ್ಲಿ ಗಣಪತಿ ವಿಸರ್ಜನೆ ಮಾಡುವ ಸ್ಥಳದಲ್ಲಿ ಸ್ವಚ್ಚತೆ ಮಾಡಿದರು. ಮುಳ್ಳು, ಗಿಡಗಂಟಿಗಳ ಸ್ವಚ್ಚತೆ ಮಾಡಿದರು. ಗಣಪತಿ ವಿಸರ್ಜನಾ ಸ್ಥಳಕ್ಕೆ ಹೋಗುವ ರಸ್ತೆಯಲ್ಲಿ ಬೆಳೆದ ಗಿಡಗಳನ್ನು ಸ್ವಚ್ಚತೆ ಮಾಡಿದರು.
ತಾಲೂಕು ಸಮಿತಿಯ ಮಾಸ್ಟರ್ ಪ್ರವೀಣ್, ಸಂಯೋಜಕಿ ರೇಖಾ ಪಿ, ಘಟಕ ಪ್ರತಿನಿಧಿ ಸಂಪತ್ ಶೆಟ್ಟಿ, ಸದಸ್ಯರುಗಳಾದ ಮೊಹನಂದ, ಮಹಾಬಲ ರೈ ,ಅಶೋಕ್ ಬೋಲ್ಮರು, ಪವಿತ್ರ ,ರೋಹಿತ್, ನಾರಾಯಣ ಶೆಟ್ಟಿ, ಶಶಿಕಲಾ,ಚಿದಾನಂದ ಶೆಟ್ಟಿ, ಶಕುಂತಲಾ, ನವೀನ್ ನಾಯ್ಕ ಶ್ರಮದಾನದಲ್ಲಿ ಭಾಗವಹಿಸಿದರು.

ಈ ಶ್ರಮದಾನದಲ್ಲಿ ಅಲಂಪುರಿ ಫ್ರೆಂಡ್ಸ್ ಕ್ಲಬ್ ಸದಸ್ಯರು ಸಹಕಾರ ನೀಡಿದರು.