ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬೆಳ್ತಂಗಡಿ ತಾಲ್ಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ ನೆರಿಯದ ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ಸರಕಾರಿ ಆರೋಗ್ಯ ಕೇಂದ್ರದ ಪರಿಸರದಲ್ಲಿ ಸ್ವಚ್ಚತಾ ಶ್ರಮದಾನವನ್ನು ನಡೆಸಿದರು.

ಆರೋಗ್ಯ ಕೇಂದ್ರದ ವೈದ್ಯರ ಮನವಿಯ ಮೇರೆಗೆ ಶ್ರಮದಾನ ನಡೆಸಿದ ಸ್ವಯಂಸೇವಕರು ಆಸ್ಪತ್ರೆಯ ಪರಿಸರದಲ್ಲಿ ಸ್ವಚ್ಚತೆ ಮಾಡಿದರು. ಅನಗತ್ಯವಾಗಿ ಬೆಳೆದ ಗಿಡಗಂಟಿಗಳ ತೆರವು ಕೆಲಸ ಮಾಡಿದರು.
ಘಟಕದ ಸದಸ್ಯರಾದ ನಾಗೇಶ್ ಬಿ. ಸತೀಶ್ ಕೆ., ಧರ್ಮಪ್ಪ, ಸುಮತಿ, ಶಶಿಕಲಾ, ಸುಮಿತ್ರ ಭಾಗವಹಿಸಿದದ್ರು.