ಬೆಳ್ತಂಗಡಿ: ಶೌರ್ಯ ತಂಡದಿಂದ ಶಾಲೆಯಲ್ಲಿ ಅಡಿಕೆ ತೋಟ ರಚನೆ; ನಾಲ್ಕು ವರ್ಷದ ಹಿಂದೆ ನೆಟ್ಟ ಗಿಡಗಳ ಪೋಷಣೆಗೆ ಶ್ರಮದಾನ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ  ಬೆಳ್ತಂಗಡಿ  ತಾಲ್ಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ ಇಂದಬೆಟ್ಟು ಘಟಕದ ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ಶಾಲೆಯಲ್ಲಿ ಅಡಿಕೆ ತೋಟ ರಚನೆಯ ಕೆಲಸ ಮಾಡಿದರು.

ಸದಾ ಚಟುವಟಿಕೆಯಿಂದ ಇರುವ, ಕಳೆದ ಆರು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಶೌರ್ಯ ತಂಡ ಇಂದಬೆಟ್ಟು ತಂಡವಾಗಿದ್ದು ತಮ್ಮದೇ ಗ್ರಾಮದ ಪ್ರೌಢಶಾಲೆಯಲ್ಲಿ 400 ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ನಾಟಿ ಮಾಡಿ ಕಳೆದ ನಾಲ್ಕು ವರ್ಷಗಳಿಂದ ಪೋಷಣೆ ಮಾಡುತ್ತಿದ್ದಾರೆ.

ಕಳೆದ ನಾಲ್ಕು ವರ್ಷದ ಹಿಂದೆ ಸರಕಾರಿ ಪ್ರೌಢಶಾಲೆ ಬಂಗಾಡಿಯಲ್ಲಿ 150 ಅಡಿಕೆ ಗಿಡಗಳನ್ನು ನೆಟ್ಟಿದ್ದರು. ಪುನಃ 3 ವರ್ಷದ ಹಿಂದೆ 170 ಗಿಡಗಳನ್ನು ನಾಟಿ ಮಾಡಿದ್ದರು. ಪುನಃ ಈ ವರ್ಷ 130 ಗಿಡಗಳನ್ನು ನಾಟಿ ಮಾಡಿರುತ್ತಾರೆ. ಇದುವರೆಗೆ ಒಟ್ಟು 450 ಗಿಡಗಳನ್ನು ಶಾಲೆಯಲ್ಲಿ ನಾಟಿ ಮಾಡಿರುತ್ತಾರೆ.

ಪ್ರತಿ ವರ್ಷದಂತೆ ನಾಟಿ ಮಾಡಿದ ಗಿಡಗಳ ಬುಡ ಸ್ವಚ್ಚತೆ ಮಾಡಿ ಗೊಬ್ಬರ ಹಾಕುವ ಕೆಲಸವನ್ನು ಸ್ವಯಂಸೇವಕರು ಮಾಡಿದರು.

ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಿಕ್ಷಕರು, ಮಕ್ಕಳ ಪೋಷಕರು ಹಾಗೂ ಮಕ್ಕಳು ನಮ್ಮ ಜೊತೆ ಸಹಕರಿಸಿದರು.

ಶೌರ್ಯ ತಂಡದ ಘಟಕ ಪ್ರತಿನಿಧಿ ಶ್ರೀ ಕೇಶವ ಗೌಡ ರವರು ಗಿಡ ನೆಡುವ ಮೂಲಕ ಗಿಡ ನಾಟಿ  ಹಾಗೂ ಸ್ವಚ್ಚತೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಘಟಕದ ಸದಸ್ಯರಾದ ಕೇಶವ ಗೌಡ, ಪವನ್, ಸುಧೀಶ್ ಕುಮಾರ್, ವಿಶ್ವನಾಥ ಗೌಡ, ಶ್ರೀಮತಿ ಹರಿಣಾಕ್ಷಿ, ಚಂದ್ರಶೇಖರ ಗೌಡ ಶ್ರಮದಾನದಲ್ಲಿ ಭಾಗವಹಿಸಿದರು.

Share Article
Previous ಕಡಬ: ನೆಲ್ಯಾಡಿ ಶೌರ್ಯ ತಂಡದಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸ್ವಚ್ಚತೆ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Canara Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved