
ಮೂಡಿಗೆರೆ: ಏಪ್ರಿಲ್ ೧೬: ಮೂಡಿಗೆರೆ ವ್ಯಾಪ್ತಿಯಲ್ಲಿ ಬರುವ (ಊರು ಮತ್ತು ವ್ಯಕ್ತಿಯ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ) ಗ್ರಾಮದ ೨೮ ವರ್ಷದ ವ್ಯಕ್ತಿ ಬೆಂಗಳೂರಿನಲ್ಲಿ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು.ಇವರು ಕಳೆದ ಐದು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಇವರನ್ನು ಆಸ್ಪತ್ರೆಗೆ ದಾಖಲು ಮಾಡಿದಾಗ, ಕೊರೋನ ಇರುವುದು ಪತ್ತೆಯಾಗಿರುತ್ತದೆ. ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿರುತ್ತಾರೆ.ಇವರ ಶವವನ್ನು ಬೆಂಗಳೂರಿನಿAದ ಮೂಡಿಗೆರೆಯ ಸ್ವ ಗ್ರಾಮಕ್ಕೆ ತರಲಾಗಿತ್ತು.ಒಡಹುಟ್ಟಿದ ಅಣ್ಣ-ತಮ್ಮ ಅಕ್ಕ-ತಂಗಿ, ಬಂಧು-ಬಳಗ ಸ್ನೇಹಿತರು, ಬಂಧುಗಳು, ಸಹ ಮಾರು ದೂರ ನಿಂತು ನೋಡುವ ಮತ್ತು ಮಗನೇ ತನಗೆ ಜನ್ಮನೀಡಿದ ತಂದೆಯ ಅಂತ್ಯಸAಸ್ಕಾರವನ್ನು ಮಾಡದೆ ಹೋಗುವ ಈ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು, ಶವ ಸಂಸ್ಕಾರದಲ್ಲಿ ಸ್ವಯಂಸೇವಕರು ಪಾಲ್ಗೊಂಡಿದ್ದರು.ಸ್ವಯAಸೇವಕರಾದ ಆರಿಫ್ ಬಣಕಲ್, ಮೂಡಿಗೆರೆಯ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಫಿಶ್, ಮೋಣು, ಅಬ್ದುಲ್ ರಹಿಮಾನ್, ಹಸೈನರ್ ಬಿಳಗುಳ. ಫೀಸ್& ಅವರ್ನೆಸ್, ಟ್ರಸ್ಟಿನ ಸ್ಥಾಪಕ ಅಲ್ತಾಫ್ ಬಿಳಗುಳ, ಸುಲೆಮಾನ್, ಹ್ಯಾಂಡ್ ಪೋಸ್ಟ್ಇವರುಗಳು ಅಂತ್ಯಕ್ರಿಯೆ ನೆರವೇರಿಸಿದರು. ಇವರ ಸೇವಾಕಾರ್ಯಕ್ಕೆ ಮೃತರ, ಸಂಬAಧಿಕರು ಮತ್ತು ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದರು.