
ಮೂಡಿಗೆರೆ, ಏಪ್ರಿಲ್ ೨೩: ” ಶೌರ್ಯ” ವಿಪತ್ತು ಸೇವಾ ತಂಡ ಕಸಬಾ ವಲಯ ಹಾಗೂ ಶಿವಗಿರಿ ಸೇವಕರು, ಮೂಡಿಗೆರೆ ವತಿಯಿಂದ ಈ ದಿನ ಮೂಡಿಗೆರೆ ನಗರಾದ್ಯಂತ ಕೊರೋನಾ ಬಗ್ಗೆ ಜನಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು. ಮುಖಕ್ಕೆ ಮಾಸ್ಕ್ ಧರಿಸುವುದರಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.ಮೂಡಿಗೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಗಡಿ-ಮುAಗಟ್ಟು ಹಾಗೂ ಮಳಿಗೆಗಳಲ್ಲಿ, ವ್ಯಾಪಾರಕ್ಕೆ ಆಗಮಿಸಿದ್ದ ಜನಗಳಿಗೆ ಕೊರೋನ ವ್ಯಾಪಕವಾಗಿ ಹಬ್ಬುತ್ತಿರುವದನ್ನು ಅವರಿಗೆ ಮನವರಿಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ವಿಠ್ಠಲ್ ಪೂಜಾರಿ, ಮೇಲ್ವಿಚಾರಕರಾದ ವಿಜ್ಞೇಶ್, ಸಂಯೋಜಕ ಪ್ರವೀಣ್ ಪೂಜಾರಿ, ಸ್ವಯಂಸೇವಕರಾದ ರವಿ ಪೂಜಾರಿ, ಅರುಣ್ ಪಿಂಟೋ, ಸುರೇಶ್ ಶಿವಗಿರಿ ಸೇವಕರು ತಂಡದ ಸದಸ್ಯರುಗಳಾದ ಪ್ರವೀಣ್, ರಘು, ವೆಂಕಟೇಶ್, ಉಮೇಶ್ ಲೋಕವಳ್ಳಿ, ಸಂತೋಷ್, ಗಣೇಶ್, ಮಂಜು ಹಳೆಕೋಟೆ, ಹರೀಶ್, ಪ್ರವೀಣ್ ಬಾಪುನಗರ ಉಪಸ್ಥಿತರಿದ್ದರು.
