ಮಳೆಗಾಲದಲ್ಲಿ ಉಂಟಾಗಬಹುದಾದ ವಿಪತ್ತುಗಳ ನಿರ್ವಹಣೆಗೆ ಸನ್ನದ್ದುಗೊಳ್ಳುವ ನಿಟ್ಟಿನಲ್ಲಿ ಅಗ್ನಿಶಾಮಕ ದಳದ ಕಚೇರಿಯನ್ನು ಭೇಟಿ ಮಾಡಿ ಅಗ್ನಿಶಾಮಕ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಪರಿಚಯಿಸಿಕೊಂಡಿದ್ದಾರೆ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಚಂದಾಪುರದ ಸ್ವಯಂಸೇವಕರು.

ಶೌರ್ಯ ಘಟಕದಲ್ಲಿ 11 ಮಂದಿ ಸ್ವಯಂಸೇವಕರಿದ್ದು ಅಗ್ನಿಶಾಮಕ ಠಾಣೆಯ ಸಂಪರ್ಕ ಹೊಂದಿದ್ದಲ್ಲಿ ವಿಪತ್ತು ನಿರ್ವಹಣೆಗೆ ಅನುಕೂಲವಾಗುತ್ತದೆ ಎಂದುಕೊಂಡು ತಾಲ್ಲೂಕು ಯೋಜನಾಧಿಕಾರಿಯವರಾದ ಶ್ರೀಮತಿ ಶಕುಂತಲಾ ಇವರ ಮಾರ್ಗದರ್ಶನದಲ್ಲಿ ಅಗ್ನಿಶಾಮಕ ಠಾಣೆಯನ್ನು ದಿನಾಂಕ:- 30/05/2026 ರಂದು ಭೇಟಿ ಮಾಡಿದರು.
ಅಗ್ನಿಶಾಮಕ ಠಾಣಾಧಿಕಾರಿ ಎಸ್.ಕೆ. ಹಸನ್ ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಿಂಚೋಳಿ ಭಾಗದಲ್ಲಿ ಸಮಾಜದ ಭಿವೃದ್ಧಿಗಾಗಿ ಅತ್ಯುತ್ತಮ ಕೆಲಸ ಮಾಡುತ್ತಿದೆ. ವಿಪತ್ತು ನಿರ್ವಹಣೆಗೂ ತಂಡವನ್ನು ರಚಿಸಿದ್ದು ಬಹಳ ಸಂತೋಷ ತಂದಿದೆ ಎಂದರು.

ಮಳೆಗಾಲದ ವಿಪತ್ತಿನ ಸಮಯದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳ ಕೊರತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಶೌರ್ಯ ಸಂಘಟನೆ ನಮ್ಮ ಜೊತೆಗೆ ಕೈಜೋಡಿಸಿದರೆ ಬಹಳ ನುಕೂಲವಾಗುತ್ತದೆ. ಆಪತ್ತಿನಲ್ಲಿರುವವರ ರಕ್ಷಣೆಗೆ ಶೀಘ್ರ ಧಾವಿಸಿ ಸ್ಪಂದಿಸಲು ಅವಕಾಶವಾಗುತ್ತದೆ ಎಂದು ತಿಳಿಸಿ ಎಲ್ಲಾ ಸ್ವಯಂಸೇವಕರ ದೂರವಾಣಿ ಸಂಖ್ಯೆ ಪಡೆದುಕೊಂಡರು.
ಘಟಕದ ಸಂಯೋಜಕಿ ಕರಬಸಮ್ಮ ಇವರ ನೇತ್ರತ್ವದಲ್ಲಿ ಘಟಕದ ಸದಸ್ಯರಾದ ರಾಘವೇಂದ್ರ, ಬಸಯ್ಯ, ಸಂಜು ಪಾಟೀಲ್, ಶಿವಪ್ರಸಾದ್, ಮಮ್ತಾ, ಕವಿತಾ, ಕುಸುಮವತಿ, ಮಲ್ಲಿನಾಥ್ ಮಲ್ಲಪ್ಪ, ಶಾಂತವಿರ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಸ್ವಯಂಸೇವಕರು ಅಗ್ನಿಶಾಮಕ ಠಾಣೆಯ ಆವರಣದಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿದರು.