ಬ್ರಹ್ಮಾವರ ತಾಲ್ಲೂಕಿನ ಯಡ್ತಾಡಿಯಲ್ಲಿ ರಾತ್ರಿ ಸುರಿದ ಗಾಳಿ ಮಳೆಗೆ ಕೇಸಾಪುರದ ಗಿರಿಜಾ ಪೂಜಾರ್ತಿ ಇವರು ವಾಸಮಾಡುವ ಮನೆಯ ಮೇಲೆ ಮರ ಬಿದ್ದ ಘಟನೆ ನಡೆದಿದೆ.

ಶ್ರೀ ಧರ್ಮಸ್ಥಳ ಶೌರ್ಯ ತಂಡದ ಸದಸ್ಯರಿಗೆ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿ ಮರವನ್ನು ತೆರವುಗೊಳಿಸಿದರು. ಹಾನಿಯಾದ ಸಿಮೆಂಟ್ ಸೀಟುಗಳನ್ನು ಬದಲಾಯಿಸಿ ಸಂತ್ರಸ್ತರಿಗೆ ಆಪತ್ಬಾಂಧವರಂತೆ ನೆರವು ನೀಡಿದರು.
ಘಟಕದ ಸದಸ್ಯರಾದ ರಮೇಶ್, ಸುಬ್ರಮಣ್ಯ ಸಹಕಾರ ನೀಡಿದವರು.