ಬ್ರಹ್ಮಾವರ ತಾಲ್ಲೂಕಿನ ಬಾರ್ಕೂರು ಗ್ರಾಮದ ಸೇತುವೆಯ ಮೇಲ್ಭಾಗದಲ್ಲಿ ನೀರು ಹರಿದು ಹೋಗುವ ರಂದ್ರಗಳಲ್ಲಿ ಹುಲ್ಲು, ಉಸುಕು, ಮಣ್ಣು ಶೇಖರಗೊಂಡು, ನೀರು ಹರಿದು ಹೋಗಲು ಅಡಚಣೆ ಉಂಟಾಗಿತ್ತು.

ಸೇತುವೆಯ ಮೇಲೆ ನೀರು ನಿಲ್ಲುತ್ತಿದ್ದುದರಿಂದ ಪಾದಚಾರಿಗಳಿಗೆ, ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿತ್ತು. ಆದುದರಿಂದ ನೀರು ನಿಲ್ಲುವುದರಿಂದ ಉಂಟಾಗುವ ಅಪಾಯ ತಡೆಯುವ ಉದ್ದೇಶದಿಂದ ಬಾರ್ಕೂರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಸೇತುವೆಯ ಮೇಲಿನ ಮಣ್ಣು,ಕಳೆ ಹುಲ್ಲನ್ನು ಸ್ಥಳೀಯರ ಸಹಕಾರದೊಂದಿಗೆ ತೆರವುಗೊಳಿಸಿ ನೀರು ಹರಿದು ಹೋಗಲು ಅನುವು ಮಾಡಿಕೊಟ್ಟಿದ್ದಾರೆ.

ಸ್ವಯಂಸೇವಕರಾದ ಅಶೋಕ್, ಕೀರ್ತಿ ಶೆಟ್ಟಿಗಾರ್, ಸುರೇಶ್ ನಾಯ್ಕ್, ನಿರ್ಮಲ, ನಿರ್ಮಲ K, ಜ್ಯೋತಿ, ರೇಖಾ, ಸತೀಶ್, ಮಂಜುನಾಥ್ ಭಾಗವಹಿಸಿದರು.