ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ಯುವಕ ಸಾವು; ಎರಡು ದಿನದ ನಂತರ ಶವ ಪತ್ತೆ, ಕಾರ್ಯಾಚರಣೆಯಲ್ಲಿ ತೊಡಗಿಕೊಂಡ ಶೌರ್ಯ ತಂಡ.

ಬೈಂದೂರು ತಾಲ್ಲೂಕಿನ ಗಂಗೊಳ್ಳಿ  ಬಂದರು  ವ್ಯಾಪ್ತಿಯಲ್ಲಿ ಕೆಲಸಕ್ಕೆಂದು ಬಂದಿದ್ದ ಬೋಟ್ ನ ಕೂಲಿ ಕಾರ್ಮಿಕ ಸಂತೋಷ್ ಎನ್ನುವ ಯುವಕ ಅಕಸ್ಮಾತ್ ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಬೆಳಿಗ್ಗಿನ ಜಾವ ಸುಮಾರು ಐದು ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದ್ದು ಸ್ಥಳೀಯರ ಮೂಲಕ ವಿಷಯ ತಿಳಿಯುತ್ತಿದ್ದಂತೆಯೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗಂಗೋಳ್ಳಿಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ನದಿಯಲ್ಲಿ ಮೃತದೇಹ ಪತ್ತೆಯ ಕಾರ್ಯಾಚರಣೆ ನಡೆಸಿದರು.

ದೋಣಿಯ ಮೂಲಕ ನದಿಯಲ್ಲಿ ಪತ್ತೆಕಾರ್ಯ ಆರಂಭಿಸಿ ಸುಮಾರು ಮೂರುಕಿಲೋಮೀಟರ್ ವ್ಯಾಪ್ತಿಯ ವರೆಗೆ ನದಿಯ ದಂಡೆಯ ಮೇಲೆ ಮತ್ತು ದೋಣಿಯ ಮೇಲೆ ಸಾಗಿ ಹುಡುಕಾಟ ನಡೆಸಿದ್ದಾರೆ.

ಘಟಕದ ಸ್ವಯಂಸೇವಕರಾದ ದಿನೇಶ್  ಕಾರ್ವಿ,  ಪ್ರಶಾಂತ್ ಕಾರ್ವಿ,  ವಿವೇಕ್ ಬಿ,  ವಿಶ್ವನಾಥ್ ಗಂಗೊಳ್ಳಿ ಇವರು ಬೋಟ್ ನ ಕೆಲಸಗಾರರ ಜೊತೆಗೆ ಸೇರಿಕೊಂಡು ಕಾಣೆಯಾದ ವ್ಯಕ್ತಿಯ ಪತ್ತೆ ಕಾರ್ಯಾಚರಣೆ ನಡೆಸಿರುತ್ತಾರೆ.

ಎರಡು ದಿನದ ನಂತರ ತಲ್ಲೂರು ಹೇರಿ ಕುದ್ರು   ಸೇತುವೆಯ ಬಳಿ ಆ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದ್ದು, ಶವವನ್ನು ತೆಗೆದು ಕುಟುಂಬದ ಸದಸ್ಯರಿಗೆ ಒಪ್ಪಿಸಿರುತ್ತಾರೆ. ಸ್ಥಳೀಯ ಅಂಬುಲೆನ್ಸ್  ಚಾಲಕ ರಾದಾ ಸಚಿನ್ ಖಾರ್ವಿ ಇವರು ಅಂಬುಲೆನ್ಸ್ ಮೂಲಕ ಮೃತದೇಹ ಸಾಗಿಸಲು ಸಹಕಾರ ನೀಡಿರುತ್ತಾರೆ.

ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಾದ ದಿನೇಶ್  ಕಾರ್ವಿ,  ಪ್ರಶಾಂತ್ ಕಾರ್ವಿ,  ವಿವೇಕ್ ಬಿ,  ವಿಶ್ವನಾಥ್ ಗಂಗೊಳ್ಳಿ ಇವರು ಈಜು ಪರಿಣಿತರಾಗಿದ್ದು ನದಿಯಲ್ಲಿ ಮುಳುಗಿ ಮೃತ ದೇಹವನ್ನು ಹುಡುಕಿ ತರುವ ತಜ್ಞತೆಯನ್ನೂ ಹೊಂದಿರುತ್ತಾರೆ. ಎರಡು ದಿನದ ವರೆಗೆ ಹುಡುಕಾಟ ನಡೆಸಿದ ಸ್ವಯಂಸೇವಕರಿಗೆ ಪೊಲೀಸರು ಮೆಚ್ಚುಗೆ ಸೂಚಿಸಿದ್ದಾರೆ.

Share Article
Previous ಸುಳ್ಯ: ಶೌರ್ಯ ತಂಡದವರು ಕಟ್ಟಿದ ಶೌರ್ಯ ಶ್ರೀ ಮನೆ

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved