ವಿಟ್ಲ ತಾಲ್ಲೂಕಿನ ಕೇಪು ಘಟಕದ ಸ್ವಯಂಸೇವಕರು ಬಡ ಕುಟುಂಬದ ಮನೆ ರಿಪೇರಿಗೆ ಸಹಕಾರ ನೀಡಿ ಮಾನವೀಯತೆ ಮೆರೆದಿದ್ದಾರೆ.

ಕೇಪು ಸಮೀಪದ ಅಮೈ ಎಂಬಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸ್ವಸಹಾಯ ಸಂಘದ ಸದಸ್ಯರ ಮನೆಯು ಮಳೆಯಿಂದ ಸೋರುತ್ತಿತ್ತು. ಒಬ್ಬರೇ ಇರುವುದರಿಂದ ಮನೆ ರಿಪೇರಿ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಬಡ ಕುಟುಂಬದವರಾದ ಿವರಿಗೆ ನೆರವಿನ ಗತ್ಯ ಮನಗಂಡ ಸ್ವಯಂಸೇವಕರು ಮನೆ ರಿಪೇರಿ ಮಾಡಿಕೊಟ್ಟಿದ್ದಾರೆ.

ಘಟಕದ ಸದಸ್ಯರಾದ ಗಾಯತ್ರಿ, ಮಹಾಲಿಂಗ ಪಾಟಲಿ ಸಿ ಎಚ್, ಸದಾಶಿವ, ಸತೀಶ, ಮೀನಾಕ್ಷಿ,ಮಾಲತಿ, ಸುರೇಶ, ಮಾಧವ, ಚಂದ್ರಹಾಸ, ಆನಂದ ಬಂಗೇರ ಶ್ರಮದಾನದಲ್ಲಿ ಪಾಲ್ಗೊಂಡರು.