ಬ್ರಹ್ಮಾವರ: ಗೋವಿಗಾಗಿ ಮೇವು; ಗೋಶಾಲೆಗೆ ಮೇವು ಕಳುಹಿಸಿದ ಬಾರ್ಕೂರು ಶೌರ್ಯ ತಂಡ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಾರ್ಕೂರು ಘಟಕದ ಸ್ವಯಂಸೇವಕರು ಸಾಮಾಜಿಕ ಸೇವಾ ಕಳಕಳಿಯ ಚಟುವಟಿಕೆಯ ಭಾಗವಾಗಿ ಗೋಶಾಲೆಯ ಗೋವುಗಳಿಗೆ ಮೇವು ಸಂಗ್ರಹಿಸಿ ಕಳುಹಿಸಿಕೊಟ್ಟಿರುತ್ತಾರೆ.

ಹೊಸಾಳ ಬಾರ್ಕುರು ಮೇರಿನೋಲ್ ಹಿರಿಯ ಪ್ರಾಥಮಿಕ ಶಾಲೆಯ  ಆವರಣದಲ್ಲಿ ಬೆಳೆದ ಹುಲ್ಲನ್ನು  ಕಟಾವು ಮಾಡಿದ ಸ್ವಯಂಸೇವಕರು  ನಂಚಾರು ಕಾಮಧೇನು ಗೋಶಾಲೆಗೆ ಕಳುಹಿಸಿಕೊಟ್ಟಿರುತ್ತಾರೆ.

ಬಾರ್ಕೂರು ಶೌರ್ಯ ಘಟಕದ ಸದಸ್ಯರಾದ ಅನಿಲ್, ಅಶೋಕ್, ಯೋಗೀಶ್, ಸುರೇಶ್ ನಾಯ್ಕ್, ಜ್ಯೋತಿ, ರೇಖಾ,ಮಿಥುನ್,ಮಂಜುನಾಥ್  ಶ್ರಮದಾನದಲ್ಲಿ ಭಾಗವಹಿಸಿದ್ದರು.

Share Article
Previous ಬ್ರಹ್ಮಾವರ: ಅತಿಯಾದ ಗಾಳಿಗೆ ಹಾನಿಯಾದ ಶಾಲಾ ಶೌಚಾಲಯದ ಮೇಲ್ಚಾವಣಿ; ರಿಪೇರಿ ಮಾಡಿಕೊಟ್ಟ ಸ್ವಯಂಸೇವಕರು.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved