ಯಡ್ತಾಡಿ ಯಿಂದ ಕೂಡ್ಲಿಗಿ ಹೋಗುವ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದು ಸ್ಥಳೀಯರ ಕರೆಗೆ ಸ್ಪಂದಿಸಿದ ಯಡ್ತಾಡಿ ಘಟಕದ ಸದಸ್ಯರು ಕ್ಷೀಪ್ರಗತಿಯಲ್ಲಿ ಕಾರ್ಯಚರಣೆ ನಡೆಸಿ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸ್ವಯಂಸೇವಕರಾದ ಪುರುಷೋತ್ತಮ್, ರಮೇಶ್, ಸುಬ್ರಹ್ಮಣ್ಯ, ರಾಮ ಮರ ತೆರವಿಗೆ ಸಹಕಾರ ನೀಡಿದರು.
ಸ್ಥಳೀಯರಾದ ಸುರೇಂದ್ರ, ರಾಜ, ವಸಂತ್ ಹಾಗೂ ಇತರರು ಇದ್ದರು.