ಸುಳ್ಯ ತಾಲ್ಲೂಕಿನ ನಡುಗಲ್ಲು ಸಮೀಪ ಹರಿಹರ, ಕೊಲ್ಲಮೊಗರು ರಸ್ತೆ, ಕೊರಂಬಟ ಎಂಬಲ್ಲಿ ಗುಡ್ಡ ಕುಸಿದು ಭಾರಿ ಗಾತ್ರದ ಮರಗಳು ರಸ್ತೆಗೆ ಹಾಗೂ ವಿದ್ಯುತ್ ಲೈನ್ ಮೇಲೆ ಬಿದ್ದಿರುವ ಘಟನೆ ನಡೆದಿದೆ.

ಅತಿಯಾದ ಮಳೆ ಗಾಳಿಯ ಪರಿಣಾಮ ಈ ಘಟನೆ ನಡೆದಿದ್ದು ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಅರಣ್ಯ ಇಲಾಖೆ, ವಿದ್ಯುತ್ ಪ್ರಸರಣ ಇಲಾಖೆ ಮತ್ತು ಕಂದಾಯ ಇಲಾಖೆ ಸಿಬ್ಬಂದಿಗಳ ಮನವಿಯ ಮೇರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ನಾಲ್ಕೂರು ಸ್ವಯಂಸೇವಕರು ಮರವನ್ನು ತೆರವುಗೊಳಿಸಲು ಸಹಕಾರ ನೀಡಿದರು.
ಸ್ವಯಂಸೇವಕರಾದ ಸತೀಶ್, ಕಾರ್ತಿಕ್, ಲೋಹಿತ್, ಕರುಣಾಕರ, ಶೇಷಪ್ಪ ನಾಯ್ಕ, ಚಂದ್ರಶೇಖರ, ಪ್ರಜ್ವಲ್, ಹರಿಶ್ಚಂದ್ರ ರವರು ಮರ ತೆರವಿಗೆ ಸಹಕಾರ ನೀಡಿರುತ್ತಾರೆ.

ಈ ಸಂಧರ್ಭ ಅರಣ್ಯ ಇಲಾಖೆ ಸಿಬ್ಬಂದಿ ಬಸಪ್ಪ, ವಿದ್ಯುತ್ ಇಲಾಖೆ ಸಿಬ್ಬಂದಿ ವೆಂಕಟ್ ಮೊಟ್ನೂರು, ಗ್ರಾಮಕರಣಿಕ ರಾದ ಭಾರತಿ. ಮಿಥುನ್ , ವಲಯ ಮೇಲ್ವಿಚಾರಕ ರಾಜೇಶ್ ಉಪಸ್ಥಿತರಿದ್ದರು.