ಸುಳ್ಯ ತಾಲ್ಲೂಕಿನ ಮಂಡೆಕೋಲಿಂದ ಮರೂರಿಗೆ ಹಾದು ಹೋಗುವ ಮುಖ್ಯ ರಸ್ತೆಯಲ್ಲಿ ರಾತ್ರಿ 8-30 ರ ವೇಳೆಗೆ ವಿಪರೀತವಾಗಿ ಸುರಿಯುತ್ತಿರುವ ಗಾಳಿ ಮಳೆಗೆ ಬೃಹದಾಕಾರವಾದ ಮರಗಳು ಬಿದ್ದಿದ್ದು ವಾಹನ ಸಂಚಾರಕ್ಕೆ ಅಡೆತಡೆಯಾಗುತ್ತಿತ್ತು.

ಸಾರ್ವಜನಿಕರಿಂದ ಸುದ್ದಿ ತಿಳಿದ ತಕ್ಷಣ ರಾತೋ ರಾತ್ರಿ ಸ್ಥಳಕ್ಕೆ ಆಗಮಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಂಡೆಕೋಲು ಶೌರ್ಯ ವಿಪತ್ತು ತಂಡದ ಸದಸ್ಯರು ಮರಗಳನ್ನು ತೆರವುಗೊಳಿಸಿ ವಾಹನ ಸಂಚಾರ ಸುಗಮವಾಗುವಂತೆ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ.
ಘಟಕದ ಸದಸ್ಯರಾದ ಗುರುಪ್ರಸಾದ್, ಸುರೇಶ್ ಕೆ . ಎನ್ , ದೇವಿಪ್ರಸಾದ್, ಶಿವಪ್ರಸಾದ್ ಭಾಗವಹಿಸಿದ್ದರು.