ಸುಳ್ಯ ತಾಲ್ಲೂಕಿನ ನಿಂತಿಕಲ್ಲು ಗ್ರಾಮದ ಪೊಯೊತ್ತುರು ಮನೆ ಎಂಬಲ್ಲಿನ ಶರತ್ ಎನ್ನುವವರ ಮನೆಯ ಹಿಂಬಾಗದಲ್ಲಿ ಗುಡ್ಡದ ಮಣ್ಣು ಕುಸಿದ ಹಿನ್ನೆಲೆಯಲ್ಲಿ ತೆರವುಗೊಳಿಸಲು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಸಹಕಾರ ನೀಡಿದರು.

ನಿಂತಿಕಲ್ಲು ಘಟಕದ ಸದಸ್ಯರಾದ ಶರತ್ ಕುಮಾರ್, ಗಣೇಶ್, ದಿನೇಶ್, ಪದ್ಮನಾಭ, ರತ್ನಾವತಿ, ಭವ್ಯ, ಆನಂದ, ಸುಮಿತ, ಪೂವಮ್ಮ, ಶ್ಯಾಮಲಾ ಇವರು ಶ್ರಮದಾನದಲ್ಲಿ ಭಾಗವಹಿಸಿದ್ದರು.
