ಅತಿಯಾದ ಮಳೆಯಿಂದ ಕೊಡ್ಲಾಗದ್ದೆ ಕೊಪ್ಪ ಸಿಮೆಂಟ್ ರಸ್ತೆ ಮೇಲೆ ಪಾಚಿ ಬೆಳೆದು ಓಡಾಡುವ ಜನರು ಹಾಗೂ ವಾಹನ ಸ್ಕಿಡ್ ಆಗಿ ಬಿದ್ದು ಗಾಯ ವಾಗಿರುವ ಘಟನೆ ನಡೆದಿದೆ.

ಇದನ್ನು ಗಮನಿಸಿದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂ ಸೇವಕರು ಸುಣ್ಣ ಹಾಕುವ ಬಗ್ಗೆ ನಿರ್ಧರಿಸಿದಾಗ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಚಂದ್ರಕಾಂತ್ ನಾಯ್ಕ್, ನಾಗರಾಜ್ ಹೆಗಡೆ ಇವರು ಸುಣ್ಣವನ್ನು ನೀಡಿರುತ್ತಾರೆ.
ಘಟಕದ ಸದಸ್ಯರಾದ ತಿಮ್ಮಪ್ಪ, ಮಾದೇವ, ಮೋಹನ್, ನಾಗೇಶ್, ಮಾರುತಿ ಇವರು ಸಿಮೆಂಟ್ ರಸ್ತೆಗೆ ಸುಣ್ಣ ಹಾಕಿ ಓಡಾಡುವರಿಗೆ ಅನುಕೂಲ ಮಾಡಿದ್ದಾರೆ.
ಸ್ವಯಂಸೇವಕರ ಈ ಸೇವೆಗೆ ಗ್ರಾಮಪಂಚಾಯತಿಯವರು ಅಭಿನಂದನೆ ಸಲ್ಲಿಸಿದ್ದಾರೆ.