ಬೈಂದೂರು ತಾಲ್ಲೂಕಿನ ಶಿರೂರಿನ ಪ್ರಾಥಮಿಕ ಶಾಲೆ ಮೈದಾನದಲ್ಲಿ ಬೀದಿ ನಾಯಿ ಕಚ್ಚಿ ಆಕಳ ಕರುವಿಗೆ ತುಂಬಾ ಗಾಯವಾಗಿತ್ತು.

ನಾಯಿ ಕಚ್ಚಿದ ಕಾರಣದಿಂದ ನರಳುತ್ತಿದ್ದ ಆಕಳ ಕರುವನ್ನು ಗಮನಿಸಿದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿರುತ್ತಾರೆ.
ಸ್ಥಳಕ್ಕೆ ಆಗಮಿಸಿದ ಪಶುವೈದ್ಯರು ಆಕಳ ಕರುವಿಗೆ ಚಿಕಿತ್ಸೆ ನೀಡಿರುತ್ತಾರೆ. ಆಕಳ ಕರುವಿನ ವಾರಸುದಾರರು ಯಾರು ರಂದು ಮಾಹಿತಿ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಘಟಕದ ಸದಸ್ಯರಾದ ಸುರೇಶ್ ಮೇಸ್ತ್ ಅವರ ಮನೆಯಲ್ಲಿ ಹಸುವನ್ನು ರಕ್ಷಿಸಲಾಗಿದೆ.
ಹಡವಿನಕೋಣೆ ಘಟಕದ ಸದಸ್ಯರಾದ ಅಣ್ಣಪ್ಪ, ಪ್ರಕಾಶ, ರತ್ನಾಕರ ಉಪಸ್ಥಿತರಿದ್ದರು.