ಹೆಬ್ರಿ ತಾಲ್ಲೂಕಿನ ಕೈಕಂಬದ ಬಳಿಯ ಹಸಿನ ಭಾನು ಎನ್ನುವವರ ಮನೆಯ ಬಳಿ ಇರುವ ಮರವು ಮಳೆಗೆ ಮನೆಗೆ ಬೀಳುವ ಹಂತದಲ್ಲಿತ್ತು. ಅಪಾಯಕಾರಿಯಾಗಿರುವ ಈ ಮರವನ್ನು ಶೌರ್ಯ ವಿಪತ್ತು ನಿರ್ವಹಣಾ ಘಟಕ ಚೇರ್ಕಾಡಿಯ ಸದಸ್ಯರು ಮನೆಯ ಸದಸ್ಯರ ಮನವಿಯ ಮೇರೆಗೆ ತೆರವು ಮಾಡಿದರು.

ಈ ಸಂದರ್ಭದಲ್ಲಿ ಸಂಯೋಜಕಿಯಾದ ವಿಜಯ ಕಾಮತ್, ಸದಸ್ಯರಾದ ರಾಜೇಶ್ ಪ್ರವೀಣ್, ಸಂಜೀವ, ಅಶೋಕ್, ಕೃಷ್ಣ, ಆದಿತ್ಯ, ಮಲ್ಲಿಕಾ ಹಾಗೂ ರೇಷ್ಮಾ ಭಾಗವಹಿಸಿದ್ದರು.
