ನಿಪ್ಪಾಣಿ: ತೆರೆದ ಬಾವಿಯಲ್ಲಿ ಅನಾಥ ಶವ ಪತ್ತೆ; ತೆರವು ಕಾರ್ಯಾಚರಣೆಗೆ ಪೊಲೀಸರಿಗೆ ಸಹಕಾರ ನೀಡಿದ ಶೌರ್ಯ ತಂಡ.

ನಿಪ್ಪಾಣಿ -2 ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಬರುವ ಪಡಲಿಹಾಳ್ ಗ್ರಾಮದದಲ್ಲಿ ತೆರೆದ ಬಾವಿಯಲ್ಲಿ ಅನಾಥ ಶವ ಪತ್ತೆಯಾಗಿದ ಘಟನೆ ನಡೆದಿದೆ.

ಶವ ತೆರವು ಮಾಡಲು ಬಸವೇಶ್ವರ ಟೌನ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಮೇಶ್ ಪವಾರ್ ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ತಂಡದ ಸಹಕಾರವನ್ನು ಕೇಳಿದ್ದು  ಮನವಿಗೆ ಸ್ಪಂದಿಸಿದ ಸ್ವಯಂಸೇವಕರು ಸ್ಥಳಕ್ಕೆ ತೆರಳಿ ಶವ ತೆರವು ಕಾರ್ಯಾಚರಣೆಗೆ ಪೊಲೀಸ್ ಇಲಾಖೆಗೆ ಸಹಕಾರ ನೀಡಿರುತ್ತಾರೆ.

ಪಡಲಿ ಹಾಳ ಗ್ರಾಮದ ಹಳ್ಳದ ಹತ್ತಿರವಿರುವ ಬಾವಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಲಕನಪುರ್  ಶೌರ್ಯ ಘಟಕದ ಸ್ವಯಂಸೇವಕರಾದ  ಸಂತೋಷ್ ಮಾನೆ. ಅಮಿತ್ ಸೌದಾಗರ್. ವಿಟ್ಟಲ್ ತಾಟೆ. ಶಿವಾಜಿ ನಾಯಕ್. ಪ್ರಕಾಶ್ ಮಾಮಾನೆ ಇವರು ಕಾರ್ಯಾಚರಣೆಯಲ್ಲಿ ತೊಡಗಿಕೊಂಡರು.

ಪೊಲೀಸರ ಮನವಿಯಂತೆ ಕೃಷಿ ಮೇಲ್ವಿಚಾರಕ ಮಂಜುನಾಥ್ ಕಿತ್ತೂರ್ ಸೇವಾಪ್ರತಿನಿಧಿ ಮೀನಾಕ್ಷಿ ಜಾದವ್ ಸ್ಥಳದಲ್ಲಿದ್ದರು.

ಪತ್ತೆಯಾದ ದೇಹವನ್ನು ಹೊರತೆಗೆದಾಗ ಪೊಲೀಸರ ವಿಚಾರಣೆಯ ಬಳಿಕ ಮಹಾರಾಷ್ಟ್ರದ ಕಾಗಲ್ ತಾಲೂಕಿನ ಮಾಕ್ವೆ ಮೂಲದ ವ್ಯಕ್ತಿಯ ಶವವಾಗಿದೆ ಎಂದು ಪತ್ತೆಹಚ್ಚಿರುತ್ತಾರೆ.

ಸಹಕಾರ ನೀಡಿದ ಸ್ವಯಂಸೇವಕರಿಗೆ ಪೊಲೀಸರು ಕೃತಜ್ಞತೆ ಸಲ್ಲಿಸಿದ್ದಾರೆ. ಇಲಾಖೆಯಿಂದ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿ ನೆರವು ನೀಡಿದ ಸ್ವಯಂಸೇವಕರ ಕಾರ್ಯವನ್ನು ತಾಲ್ಲೂಕು ಯೋಜನಾಧಿಕಾರಿ ಮಂಜ ನಾಯ್ಕ್ ರವರು ಶ್ಲಾಘಿಸಿ ಸ್ವಯಂಸೇವಕರ ಸೇವೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Share Article
Previous ಹೆಬ್ರಿ: ಸರಕಾರಿ ಶಾಲೆಯಲ್ಲಿ ತರಕಾರಿ ತೋಟ; ಚಾರ ಬೆಳಂಜೆ ಶೌರ್ಯ ತಂಡದಿಂದ ರಚನೆ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved