ಹೆಬ್ರಿ: ಸರಕಾರಿ ಶಾಲೆಯಲ್ಲಿ ತರಕಾರಿ ತೋಟ; ಚಾರ ಬೆಳಂಜೆ ಶೌರ್ಯ ತಂಡದಿಂದ ರಚನೆ.

ಹೆಬ್ರಿ ತಾಲ್ಲೂಕಿನ ಕುಚ್ಚೂರು 2 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತರಕಾರಿ ಕೈತೋಟ ರಚನೆಯ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ತಂಡದ ಸದಸ್ಯರು ಮಾಡಿದ್ದಾರೆ.

 ಮಕ್ಕಳ ಬಿಸಿಯೂಟಕ್ಕೆ ಅನುಕೂಲವಾಗುವಂತೆ ಕೈತೋಟ ರಚನೆ ಮಾಡಲಾಗಿದೆ. ಶಾಲೆಯ ಆವರಣದಲ್ಲಿ ತರಕಾರಿ ಬೀಜಗಳನ್ನು ಬಿತ್ತನೆ ಮಾಡಲು ಮಡಿ ತಯಾರಿಸಿ, ಗೊಬ್ಬರ ಹಾಕಿ, ಬೀಜ ಬಿತ್ತನೆ ಮಾಡಿರುತ್ತಾರೆ.

ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಾಲಾಭಿವೃದ್ದಿ ಸಮಿತಿಯ  ಅಧ್ಯಕ್ಷರು ಇದ್ದುಕೊಂಡು ಕೈತೋಟ ರಚನೆ ಕೆಲಸ ಮಾಡಿರುತ್ತಾರೆ.

ಚಾರ ಬೆಳಂಜೆ ಶೌರ್ಯ ಘಟಕದ ಸದಸ್ಯರಾದ ಚಂದ್ರ ನಾಯ್ಕ. ಮಹೇಶ್. ರಾಘವೇಂದ್ರ. ಸತೀಶ್ ನಾಯ್ಕ. ಸಂತೋಷ್. ಸುಬ್ರಮಣ್ಯ ಶ್ರೀನಿವಾಸನಾಯ್ಕ ಕೆಲಸ ಮಾಡಿದ್ದಾರೆ.

Share Article
Previous ಮನೆಯ ಮೇಲೆ ಬೀಳುವ ಸ್ಥಿತಿಯಲ್ಲಿದ್ದ ಮರವನ್ನು ತೆರವುಗೊಳಿಸಿದ ಶೌರ್ಯ ತಂಡ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved