ಅತಿಯಾದ ಮಳೆಗೆ ಮೇಲ್ಚಾವಣಿ ಹಾನಿ, ಕಷ್ಠದಲ್ಲಿರುವ ಕುಟುಂಬಕ್ಕೆ ಸಹಕಾರ ನೀಡಿದ ಶೌರ್ಯ ತಂಡ.

ಬಂಟ್ವಾಳ ತಾಲ್ಲೂಕಿನ ವಗ್ಗ ಗ್ರಾಮದಲ್ಲಿ ಅತಿಯಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವಾರು ಮನೆಗಳು ಹಾನಿಯಾಗಿದೆ. ಕಮಲ ಎನ್ನುವ ಬಡ ಕುಟುಂಬದ  ಮನೆಯ ಮೇಲ್ಚಾವಣಿ ಹಾನಿಯಾಗಿದ್ದು ವಿಷಯ ತಿಳಿದ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ತಂಡದ ಸದಸ್ಯರು ರಿಪೇರಿ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಮಳೆಗಾಲದಲ್ಲಿ ವಿಪತ್ತು ನಿರ್ವಹಣಾ ಸೇವೆಗೆ ಸಕ್ರೀಯವಾಗಿರುವ ಸ್ವಯಂಸೇವಕರು ಹಾನಿಗೊಳಗಾದ ಮನೆಗೆ ತೆರಳಿ ಮನೆಗೆ ಹಾಕಲಾಗಿದ್ದ ಹಂಚುಗಳನ್ನು ಕೆಳಗಿಳಿಸಿ ಮೇಲ್ಚಾವಣಿಯನ್ನು ಗಟ್ಟಿಗೊಳಿಸಿ ಹಂಚಿನ ಹೊದಿಕೆ ಮಾಡಿರುತ್ತಾರೆ. ಅಲ್ಲದೇ ಪ್ಲಾಸ್ಟಿಕ್ ಶೀಟ್ ಹೊದಿಕೆ ಮಾಡಿಕೊಟ್ಟು ಮನೆಯೊಳಗೆ ನೀರು ಬರದಂತೆ ಭದ್ರತೆ ಮಾಡಿರುತ್ತಾರೆ.

ಮನೆ ರಿಪೇರಿ ಮಾಡಿಕೊಟ್ಟು ಮಾನವೀಯತೆ ಮೆರೆದ ವಗ್ಗ ಕಾಡಬೆಟ್ಟು ತಂಡಕ್ಕೆ ಬಂಟ್ವಾಳ ತಾಲ್ಲೂಕು ಯೋಜನಾಧಿಕಾರಿ ಜಯಾನಂದ.ಪಿ ರವರು ಅಭಿನಂದನೆ ಸಲ್ಲಿಸಿ ಸ್ವಯಂಸೇವಕರ ನಿಸ್ವಾರ್ಥ ಸೇವೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವಗ್ಗ ಕಾಡಬೆಟ್ಟು ಘಟಕದ ಪ್ರತಿನಿಧಿ ಪ್ರವೀಣ್, ಸದಸ್ಯರುಗಳಾದ ಸಂಪತ್ ಶೆಟ್ಟಿ ,,ಅಶೋಕ ಬೊಲ್ಮಾರ್, ಶಶಿಕಲ, ಪವಿತ್ರ ಶ್ರಮದಾನದಲ್ಲಿ ಭಾಗವಹಿಸಿದರು.

Share Article
Previous ಗಾಳಿ ಮಳೆಗೆ ಹಾರಿದ ಮನೆಯ ಮೇಲ್ಚಾವಣಿ, ಶೌರ್ಯ ತಂಡದಿಂದ ರಿಪೇರಿ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved