ಗಾಳಿ ಮಳೆಗೆ ಹಾರಿದ ಮನೆಯ ಮೇಲ್ಚಾವಣಿ, ಶೌರ್ಯ ತಂಡದಿಂದ ರಿಪೇರಿ.

ಬಂಟ್ವಾಳ ತಾಲ್ಲೂಕಿನ ವಗ್ಗ ಗ್ರಾಮದಲ್ಲಿ ಅತಿಯಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವಾರು ಮನೆಗಳು ಹಾನಿಯಾಗಿದೆ. ಬೇಬಿ ಎನ್ನುವ ಬಡ ಕುಟುಂಬದ  ಮನೆಯ ಮೇಲ್ಚಾವಣಿ ಹಾನಿಯಾಗಿದ್ದು ವಿಷಯ ತಿಳಿದ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ತಂಡದ ಸದಸ್ಯರು ರಿಪೇರಿ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಮೇಲ್ಚಾವಣಿ ರಿಪೇರಿ ಮಾಡಿ ಶಿಟ್ ಗಳ ಹೊದಿಕೆ ಮಾಡಿ ಮಳೆಯ ನೀರು ಮನೆಯೊಳಗೆ ಬರದಂತೆ ಭದ್ರಪಡಿಸಿದ್ದಾರೆ. ಮನೆಯ ಪರಿಸರದಲ್ಲಿ ಸ್ವಚ್ಚತೆಯನ್ನೂ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಮನೆ ರಿಪೇರಿ ಮಾಡುತ್ತಿರುವ ವಿಷಯ ತಿಳಿದ ಬಂಟ್ವಾಳ ತಾಲ್ಲೂಕು ಯೋಜನಾಧಿಕಾರಿ ಜಯಾನಂದ.ಪಿ ರವರು ಸ್ಥಳಕ್ಕೆ ಆಗಮಿಸಿ ಸ್ವಯಂಸೇವಕರಿಗೆ ಪ್ರೇರಣೆ ನೀಡಿ ಸ್ವಯಂಸೇವಕರ ನಿಸ್ವಾರ್ಥ ಸೇವೆಗೆ ಶ್ಲಾಘನೆ ವ್ಯಕ್ತಪಡಿಸಿದರು. ಪಂಚಾಯತ್ ಸದಸ್ಯರಾದ ಭವಾನಿ,  ಸೇವಾಪ್ರತಿನಿಧಿ ಸುಮಿತ್ರ ಉಪಸ್ಥಿತರಿದ್ದರು. ಮನೆ ರಿಪೇರಿಗೆ ಬೇಕಾದ ಸಲಕರಣೆಗಳನ್ನು ಸ್ಥಳೀಯರಾದ ಚಂದ್ರಶೇಖರ್ ಶೆಟ್ಟಿ ನೀಡಿದ್ದಾರೆ.

ವಗ್ಗ ಕಾಡಬೆಟ್ಟು ಘಟಕದ ಪ್ರತಿನಿಧಿ ಪ್ರವೀಣ್, ಸದಸ್ಯರುಗಳಾದ ಸಂಪತ್ ಶೆಟ್ಟಿ ,,ಅಶೋಕ ಬೊಲ್ಮಾರ್, ಶಶಿಕಲ, ಪವಿತ್ರ ಹಾಗೂ ಧನು ಪೂಜೆ ಶೌರ್ಯ ಘಟಕದ ಸದಸ್ಯರಾದ ಪ್ರಮೋದ್ ಆಚಾರ್ಯ ಶ್ರಮದಾನದಲ್ಲಿ ಭಾಗವಹಿಸಿದರು.

Share Article
Previous ಅತಿಯಾದ ಮಳೆ, ಹಾನಿಯಾದ ಮನೆ, ರಿಪೇರಿ ಮಾಡಿಕೊಟ್ಟು ಮಾನವೀಯತೆ ಮೆರೆದ ಶೌರ್ಯ ತಂಡ

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved