ಹಳೆಯದಾದ ಮನೆಯಾಗಿದ್ದರಿಂದ ಮನೆಯ ಮೇಲ್ಚಾವಣಿ ಹಾಳಾಗಿತ್ತು. ಮಳೆಯಲ್ಲಿ ಹಾನಿಯಾಗಿ ಮನೆಯೊಳಗಿರುವ ತಮಗೆ ಅಪಾಯ ಉಂಟಾಗಬಹುದೇನೋ ಎನ್ನುವ ಆತಂಕದಲ್ಲಿ ಕುಟುಂಬವಿತ್ತು.

ಸ್ಥಳೀಯರಿಂದ ವಿಷಯ ತಿಳಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಗ್ಗ ಕಾಡಬೆಟ್ಟು ಘಟಕದ ಸ್ವಯಂಸೇವಕರು ದಿನಾಂಕ 31/5/26 ರಂದು ಮನೆಯ ರಿಪೇರಿ ಮಾಡಿಕೊಡಬೇಕೆಂದು ನಿರ್ಧರಿಸಿ ಶ್ರಮದಾನ ಮಾಡಿ ರಿಪೇರಿ ಮಾಡಿಕೊಟ್ಟಿದ್ದಾರೆ.
ವಗ್ಗ ಗ್ರಾಮದಲ್ಲಿ ವಾಸವಿರುವ ಮಂಜುಳ ಇವರಿಗೆ ಮನೆ ಹಾಳಾಗಿದ್ದರೂ ಕೆಲಸದವರಿಗೆ ಹಣ ಕೊಟ್ಟು ರಿಪೇರಿ ಮಾಡಿಕೊಳ್ಳುವಷ್ಟು ಸ್ಥಿತಿವಂತರಾಗಿರಲಿಲ್ಲ. ಆದುದರಿಂದ ಮನೆ ರಿಪೇರಿ ಕೆಲಸ ಮಾಡದೇ ಆತಂಕದಲ್ಲಿಯೇ ದಿನ ಕಳೆಯುತ್ತಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ಘಟಕ ಕಾಡಬೆಟ್ಟು ವಗ್ಗ ತಂಡದ ಸದಸ್ಯರು ಗಮನಕ್ಕೆ ಬಂದ ಕೂಡಲೇ ಮನೆ ರಿಪೇರಿ ಕೆಲಸ ಮಾಡಿಕೊಟ್ಟಿದ್ದಾರೆ.
ಧನುಪೂಜೆ ಶೌರ್ಯ ಘಟಕದ ಸದಸ್ಯರಾದ ಪ್ರಮೋದ್ ಆಚಾರ್ ಮತ್ತು ವಾಮದಪದವು ಶೌರ್ಯ ಘಟಕದ ಘಟಕ ಪ್ರತಿನಿಧಿ ಹಾಗೂ ತಾಲೂಕಿನ ಕ್ಯಾಪ್ಟನ್ ಆಗಿರುವ ಪ್ರಕಾಶ್, ರವೀಂದ್ರ ರೈ, ಗಿರೀಶ್ ನಾಯಕ್ ಶ್ರಮಧಾನದಲ್ಲಿ ಭಾಗವಹಿಸಿದ್ದರು.
ಮನೆ ರಿಪೇರಿಗೆ ಬೇಕಾದ ಸಲಕರಣೆಗಳನ್ನು ವಾಮದಪದವು ಮಹಾಲಕ್ಷ್ಮಿ ಹಾರ್ಡ್ವೇರ್ ಅಂಗಡಿಯ ಮಾಲಿಕರಾದ ಅನಂತ್ ಪೈ ರವರು ನೀಡಿರುತ್ತಾರೆ.

ಘಟಕ ಪ್ರತಿನಿಧಿ ಪ್ರವೀಣ್, ಸದಸ್ಯರುಗಳಾದ ಸಂಪತ್ ಶೆಟ್ಟಿ ,,ಅಶೋಕ ಬೊಲ್ಮಾರ್, ಶಶಿಕಲ, ನಾರಾಯಣಪೂಜಾರಿ, ರಮೇಶ್, ವಿನೋದ್ , ಮಹಾಬಲ ರೈ ನಾರಾಯಣಶೆಟ್ಟಿ ,ಮೋಹನಂದ,ರೋಹಿತ್, ಜನಾರ್ಧನ ಉಪಸ್ಥಿತರಿದ್ದರು.