ಬೆಳ್ತಂಗಡಿ ತಾಲ್ಲೂಕಿನ ಕಲ್ಮಂಜ ಗ್ರಾಮದ ಪರಹರಿ ಮನೆ ಎಂಬಲ್ಲಿನ, ಯಮುನಾ ಎನ್ನುವವರ ಮನೆಯ ಮುಂಬಾಗದ ಮೇಲ್ಚಾವಣಿ ಗಾಳಿ ಮಳೆಗೆ ಕುಸಿದು ಬಿದ್ದಿರುತ್ತದೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಶ್ರೀ ಧರ್ಮಸ್ಥಳ ಶೌರ್ಯ ಘಟಕ ಧರ್ಮಸ್ಥಳದ ಸದಸ್ಯರು ಮನೆಯ ಮೇಲ್ಚಾವಣಿ ರಿಪೇರಿ ಮಾಡಲು ಸಹಕಾರ ನೀಡಿದರು.
ಹಾಳಾಗಿರುವ ಮೇಲ್ಚಾವಣಿಗೆ ಪ್ಲಾಸ್ಟಿಕ್ ಟರ್ಪಲ್ ಹೊದಿಸಿ ಮನೆಯನ್ನು ತಾತ್ಕಾಲಿಕವಾಗಿ ಸರಿಪಡಿಸಿಕೊಟ್ಟಿರುತ್ತಾರೆ.

ಸಕಾಲದಲ್ಲಿ ಬಂದು ಮನೆ ರಿಪೇರಿ ಮಾಡಿಕೊಟ್ಟ ಧರ್ಮಸ್ಥಳ ಘಟಕದ ಸ್ವಯಂಸೇವಕರಿಗೆ ಕುಟುಂಬದವರು ಕೃತಜ್ಞತೆ ಸಲ್ಲಿಸಿರುತ್ತಾರೆ.