ಕರ್ಜೆ ಹೊಸೂರು ಗ್ರಾಮದ ಸತೀಶ್ ನಾಯಕ್ ಇವರ ಬಾವಿಗೆ ಆಕಸ್ಮಿಕವಾಗಿ ಜಿಂಕೆಯೊಂದು ಬಿದ್ದ ಘಟನೆ ನಡೆದಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿ ರಕ್ಷಣೆಗೆ ಸಹಕಾರ ನೀಡುವಂತೆ ಶೌರ್ಯ ತಂಡಕ್ಕೆ ಮನವಿಯನ್ನು ಸತೀಶ್ ರವರು ಮಾಡಿಕೊಂಡಿದ್ದರು.

ಸುಮಾರು 4 ಗಂಟೆಯ ವೇಳೆಗೆ ಬಾವಿಯಲ್ಲಿ ಬಿದ್ದಿದ್ದು ಸತೀಶ್ ನಾಯಕ್ ರವರು ಶೌರ್ಯ ತಂಡದ ಸದಸ್ಯರ ಸಹಕಾರ ಕೇಳಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಜಿಂಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚೇರ್ಕಾಡಿ ಶೌರ್ಯ ಘಟಕದ ಸದಸ್ಯರಾದ ಸತೀಶ್, ಶಶಿಧರ, ಶ್ರೀಧರ್, ದಿನೇಶ, ಸುಧೀರ್, ಸಂದೀಪ, ಸತೀಶ್ ಪುತ್ರನ್ ಹರೀಶ ಇದ್ದರು.