ಸುಳ್ಯ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಹಾಲೆಮಜಲು ಶಾಲಾ ಬಳಿ ಅಪಾಯಕಾರಿ ತಿರುವಿನಲ್ಲಿ ಗಿಡಗಂಟಿಗಳು ತುಂಬಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿದ್ದವು.

ಇದನ್ನು ಗಮನಿಸಿದ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ನಾಲ್ಕೂರು ಇದರ ಸ್ವಯಂಸೇವಕರು ಸೇರಿಕೊಂಡು ಕಾಡು ಕಡಿದು ಸ್ವಚ್ಛತೆ ಮಾಡುವ ಮೂಲಕ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸುವ ಮೂಲಕ ಸಾಮಾಜಿಕ ಕಾರ್ಯ ಮಾಡಿದರು.
ಇವರ ಸೇವಾ ಕಾರ್ಯಕ್ಕೆ ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದರು. ಸೇವಾಕಾರ್ಯದಲ್ಲಿ ವಲಯದ ಮೇಲ್ವಿಚಾರಕರಾದ ರಾಜೇಶ್. ಮೆಸ್ಕಾಂ ಸಿಬ್ಬಂದಿ ವೆಂಕಟ್ರಮಣ ಸಹಕರಿಸಿದರು.

ಘಟಕದ ಸಂಯೋಜಕ ಹರಿಶ್ಚಂದ್ರ ಕೆ. ಘಟಕ ಪ್ರತಿನಿಧಿ ಲೋಹಿತ್. ಸ್ವಯಂಸೇವಕರಾದ ಕರುಣಾಕರ, ಹರಿಪ್ರಸಾದ್, ಸತೀಶ್, ಚಂದ್ರಶೇಖರ್, ಶೇಷಪ್ಪ ನಾಯ್ಕ್,ದೀಪಕ್, ಪ್ರಜ್ವಲ್, ಅಶ್ವಥ್,ಕಾರ್ತಿಕ್, ನಳಿನಾಕ್ಷಿ, ಭವಾನಿ ಶ್ರಮದಾನದಲ್ಲಿ ಭಾಗವಹಿಸಿದರು.