ಸುಳ್ಯ ತಾಲ್ಲೂಕಿನ ಕಲ್ಮಡ್ಕ ಗ್ರಾಮದ ಶೆಟ್ಟಿ ಗದ್ದೆಯಿಂದ ಕಾಯಾರಕ್ಕೆ ಸಂಪರ್ಕಿಸಿಸುವ ರಸ್ತೆಯ ಬದಿಯಲ್ಲಿರುವ ವಿದ್ಯುತ್ ಕಂಬಗಳ ಮೇಲೆ ಬ್ರಹತ್ ಆಕಾರದ ಮರವೊಂದು ಉರುಳಿ ಬಿದ್ದಿದು ಸಂಚಾರಕ್ಕೆ ವ್ಯತ್ಯಯ ಉಂಟಾದ ಘಟನೆ ನಡೆದಿದೆ.

ಇದನ್ನು ಗಮನಿಸಿದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರ್ಷ ಕುಮಾರ್ ಜೋಗಿ ಬೆಟ್ಟುರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ತಂಡದ ಸದಸ್ಯರಿಗೆ ಮಾಹಿತಿ ನೀಡಿ ಮರ ತೆರವುಗೊಳಿಸಲು ಸಹಕಾರ ನೀಡುವಂತೆ ವಿನಂತಿಸಿಕೊಂಡಿರುತ್ತಾರೆ.
ಶ್ರೀ ಧರ್ಮಸ್ಥಳ ನಿಂತಿಕಲ್ಲು ವಿಪತ್ತು ನಿರ್ವಹಣಾ ಘಟಕದ ಸದಸ್ಯರು ತಕ್ಷಣ ಧಾವಿಸಿ ಮರ ತೆರವು ಮಾಡಿರುತ್ತಾರೆ.

ಶೌರ್ಯ ತಂಡದ ಸದಸ್ಯರಾದ ಗಣೇಶ್, ರಾಮಚಂದ್ರ, ರಮೇಶ್ ಕುರಿಯಾ, ರಮೇಶ್ ಕಾಚಿಲ, ಶರತ್ ಕುಮಾರ್ , ಹರಿ, ರೇಗಪ್ಪ ಇವರು ಶ್ರಮದಾನದಲ್ಲಿ ಭಾಗವಹಿಸಿದ್ದರು.