ಬ್ರಹ್ಮಾವರ ತಾಲ್ಲೂಕಿನ ಮಂದಾರ್ತಿಯ ಸೂರ್ಗಿಕಟ್ಟೆಯ ಹತ್ತಿರ ಕಸನಗುಂದಿ ಎಂಬಲ್ಲಿ, ಜೋರಾದ ಗಾಳಿ ಮಳೆ ಬಂದಿದ್ದು ಕರುಣಾಕರ ಎನ್ನುವವರ ಮನೆಯ ಮೇಲೆ ಮತ್ತು ದನದ ಕೊಟ್ಟಿದೆ ಮೇಲೆ ಮರ ಬಿದ್ದಿರುವ ಘಟನೆ ನಡೆದಿದೆ.

ಮರ ಬಿದ್ದ ರಭಸಕ್ಕೆ ಮನೆಗೆ ಹಾಕಿರುವ ತಗಡು ಶೀಟ್ ಮತ್ತು ಕೊಟ್ಟಿಗೆಯ ಶೀಟ್ ಒಡೆದು ಹೋಗಿರುತ್ತದೆ. ಕರುಣಾಕರ ರವರು ಶೌರ್ಯ ತಂಡದ ಸಹಕಾರ ಕೇಳಿಕೊಂಡಿದ್ದು ಕೂಡಲೇ ತಂಡದ ಸದಸ್ಯರು ಅಲ್ಲಿಗೆ ಧಾವಿಸಿದರು.
ಮನೆಯ ಮೇಲೆ ಬಿದ್ದ ಮರವನ್ನು ತೆರವು ಗೊಳಿಸಿದ ಸ್ವಯಂಸೇವಕರು ಮನೆಗೆ ಹೊಸದಾಗಿ ತಗಡು ಶೀಟ್ ಅನ್ನು ಮನೆಗೆ ಹಾಗೂ ಕೊಟ್ಟಿಗೆ ಗೆ ಹಾಕಿಕೊಟ್ಟಿರುತ್ತಾರೆ.
ಸ್ವಯಂಸೇವಕರಾದ ಗಣೇಶ್ ಆಚಾರ್ಯ, ಗೋಪಾಲ ಆಚಾರ್ಯ, ಸುರೇಶ ನಾಯ್ಕ್, ವಿಶ್ವನಾಥ್ ನಾಯ್ಕ್, ಚಂದ್ರ ನಾಯ್ಕ್, ಪಲ್ಲವಿ ಶೆಟ್ಟಿ ಉಪಸ್ಥಿತರಿದ್ದರು.