ಬ್ರಹ್ಮಾವರ ತಾಲ್ಲೂಕಿನ ಕೊಕ್ಕರ್ಣೆ ಯಲ್ಲಿ ಸರೋಜ ಪೂಜಾರ್ತಿ ಇವರ ಮನೆಯ ಮೇಲ್ಛಾವಣಿ ಗಾಳಿ ಮಳೆಗೆ ಶಿಥಿಲಗೊಂಡಿದ್ದು ಮಾಡು ಸರಿಪಡಿಸಿ ತಾರಪಾಲು ಹಾಕಿಕೊಟ್ಟು ಸಾಮಾಜಿಕ ಪ್ರಜ್ಞೆ ಮೆರೆದಿದ್ದಾರೆ ಶೌರ್ಯ ಶ್ರೀ ಧರ್ಮಸ್ಥಳ ಕೊಕ್ಕರ್ಣೆ ಘಟಕದ ಸ್ವಯಂಸೇವಕರು.

ಘಟಕದ ಸದಸ್ಯರಾದ ಯಶೋಧ, ಗೋಪಾಲನಾ ಯ್ಕ, ರಾಘವೇಂದ್ರ, ಕೃಷ್ಣ ಪೂಜಾರಿ, ಜೀವನ್, ಪ್ರಕಾಶನಾಯ್ಕ, ಸುಜಾತ ಶ್ರಮದಾನದಲ್ಲಿ ಭಾಗವಹಿಸಿದ್ದರು.
