ಬೈಂದೂರು ತಾಲ್ಲೂಕಿನ ಪಡುವರಿ ಗ್ರಾಮದ ಸೆಳ್ಳಾಕುಳ್ಳಿ ಎನ್ನುವ ಪ್ರದೇಶದಲ್ಲಿರುವ ಬಡ ಕುಟುಂಬದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಪ್ರೇಮ ಎನ್ನುವವರ ಮನೆಯ ಮೇಲೆ ಅತಿಯಾದ ಮಳೆ ಗಾಳಿಯಿಂದ ಮನೆಯ ಮೇಲ್ಛಾವಣಿ ಹಾನಿಗೊಳಗಾಗಿದ್ದು ಬಡಕುಟುಂಬದವರಾದ ಪ್ರೇಮಾ ಇವರಿಗೆ ಮನ ರಿಪೇರಿ ಮಾಡಿಕೊಳ್ಳುವುದು ಕಷ್ಠವಾಗಿತ್ತು.

ಇದನ್ನು ಮನಗಂಡ ಹಡವಿನಕೋಣೆ ಶೌರ್ಯ ತಂಡದ ಸ್ವಯಂಸೇವಕರು ಮನೆ ರಿಪೇರಿ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.