ಮಡಿಕೇರಿ ತಾಲ್ಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಾಪೋಕ್ಲು ಘಟಕದ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು ಕಾವೇರಿ ನದಿಯ ತೀರದಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿದರು.

ನದಿಯಲ್ಲಿ ಬಿದ್ದಿರುವಂತಹ ಕಸ, ಪ್ಲಾಸ್ಟಿಕ್ ಚೀಲಗಳು, ಬಟ್ಟೆಗಳು, ಮರದ ದಿಂಡೆಗಳು ಸೇರಿದಂತೆ ಹಲವು ವಸ್ತುಗಳನ್ನು ಆರಿಸಿ ಸ್ವಚ್ಚಗೊಳಿಸಿದರು.
ಘಟಕದ ಸ್ವಯಂಸೇವಕರಾದ ಉಮಾಲಕ್ಷ್ಮಿ, ಚಂದ್ರಕಲಾ, ಶಂಕರ, ದಿಲಿಶ್, ಮಾಯಿಲಪ್ಪ, ಶರವಣ,ಆನಂದ, ರಶ್ಮಿ ಭಾಗವಹಿಸಿದ್ದರು.
