ಬೆಳ್ತಂಗಡಿ ತಾಲ್ಲೂಕಿನ ನಿಡ್ಲೆಯ ಸುಬ್ರಮಣ್ಯ ಧರ್ಮಸ್ಥಳಕ್ಕೆ ಸಂಚಾರಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಾಳಿ ಮಳೆಗೆ ಮರವು ಉರುಳಿ ಬಿದ್ದಿದ್ದು ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ಯನ್ನು ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ನಿಡ್ಲೆ ಕಳೆಂಜ ಸ್ವಯಂ ಸೇವಕರು ನಡೆಸಿರುತ್ತಾರೆ.

ಸ್ಥಳೀಯರಿಂದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಸ್ವಯಂಸೇವಕರಾದ ಚಂದ್ರಶೇಖರ ಮತ್ತು ಕೊರಗಪ್ಪ ರವರು ಮರವನ್ನು ಕತ್ತರಿಸಿ ರಸ್ತೆಯಿಂದ ತೆರವು ಮಾಡಿರುತ್ತಾರೆ.