
ನಾಲ್ಕೂರು, ಅಕ್ಟೋಬರ್ ೨೧ : ನಾಲ್ಕೂರು ಗ್ರಾಮದ ಹಾಲೆಮಜಲು ಪಂಜಿಪಳ್ಳ ಕಿರಿದಾದ ರಸ್ತೆಯಲ್ಲಿ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಚರಂಡಿಗೆ ಜಾರಿದ್ದು ಇದರ ಮಾಹಿತಿ ತಿಳಿದ ನಾಲ್ಕೂರು ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಾದ ಲೋಹಿತ್ ಚೆಮ್ನೂರು, ಕಾರ್ತಿಕ್ ಅಮೆ ಮತ್ತು ಪ್ರಜ್ವಲ್ ಕುಂಭಡ್ಕರವರು ಸ್ಥಳೀಯ ತಮ್ಮ ಗೆಳೆಯರನ್ನು ಸೇರಿಸಿಕೊಂಡು ಜೀಪನ್ನು ಮೇಲೆತ್ತುವ ಮೂಲಕ ಚಾಲಕನಿಗೆ ಸಹಾಯ ಮಾಡಿದರು. ಇವರ ಸೇವಾಕಾರ್ಯಕ್ಕೆ ಜೀಪಿನ ಮ್ಹಾಲಕರು ಕೃತಜ್ಞತೆ ಸಲ್ಲಿಸಿದರು.