ಮೂವತ್ತು ದಿನ ನಡೆದ ಸ್ವಚ್ಚತಾ ಶ್ರಮದಾನ; ಗಾಂಧೀ ಜಯಂತಿ ಪ್ರಯುಕ್ತ ‘ಚಾರ’ ವಿಪತ್ತು ನಿರ್ವಹಣಾ ಘಟಕದಿಂದ ಶ್ಲಾಘನೀಯ ಸೇವೆ

ಹೆಬ್ರಿ ತಾಲ್ಲೂಕಿನ ‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಚಾರ  ಇದರ ಸ್ವಯಂಸೇವಕರು ಗಾಂಧೀ ಜಯಂತಿ ಪ್ರಯುಕ್ತ ಸ್ವಚ್ಚತಾ ಶ್ರಮದಾನವನ್ನು ಒಂದು ತಿಂಗಳುಗಳ ಕಾಲ ನಿರಂತರವಾಗಿ ನಡೆಸಿ ಮಾದರಿಯಾಗಿದ್ದಾರೆ.  ಸಾಮಾನ್ಯವಾಗಿ ಗಾಂಧೀ ಜಯಂತಿ ದಿನದಂದು ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಒಂದು ದಿನಕ್ಕೆ ಅವು ಸೀಮಿತವಾಗಿರುತ್ತದೆ. ರಾಷ್ಟ್ರಪಿತನ ನೆನಪಿನಲ್ಲಿ ನಡೆಸುವ ಈ ಶ್ರಮದಾನ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದೆಂದು ತೀರ್ಮಾನಿಸಿದ ಶೌರ್ಯ ಸ್ವಯಂಸೇವಕರು ತಿಂಗಳು ಪೂರ್ತಿ ನಡೆಸಲು ತೀರ್ಮಾನಿಸಿ ಕೆಲಸ ಪೂರೈಸಿದ್ದಾರೆ.

ಅಕ್ಟೋಬರ್ 1 ರಿಂದ ಆರಂಭ:

ಗಾಂಧೀ ಜಯಂತಿ ಮುನ್ನಾ ದಿನ ಅಕ್ಟೋಬರ್ 1 ರಂದು ಚಾರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಗಾಂಧೀ ಜಯಂತಿ ಪೂರ್ವ ತಯಾರಿ ಕೆಲಸವಾಗಿ 22 ಮಂದಿ ಸ್ವಯಂಸೇವಕರು ಶಾಲೆಯ ಸುತ್ತಮುತ್ತ ಸ್ವಚ್ಚತಾ ಕೆಲಸವನ್ನು ಮಾಡಿದ್ದಾರೆ. ಘಟಕದ ಸಂಯೋಜಕರಾದ ಸಹದೇವ, ಘಟಕ ಪ್ರತಿನಿಧಿ ಚಂದ್ರ ನಾಯ್ಕ ಇವರ ನೇತ್ರತ್ವದಲ್ಲಿ ಶಾಲೆಯ ಶಿಕ್ಷಕರ ವಿನಂತಿಯ ಮೇರೆಗೆ ಶಾಲೆಯ ಆವರಣದೊಳಗಿನ ಅಪಾಯಕಾರಿ ಮರಗಳ ಗೆಲ್ಲುಗಳನ್ನು ತೆರವುಗೊಳಿಸುವುದು, ಶಾಲಾ ಕೈತೋಟದಲ್ಲಿ ಮಣ್ಣು ಹದಗೊಳಿಸಿ ತರಕಾರಿ ಬೀಜ ಬಿತ್ತನೆ, ಕಸ ಕಡ್ಡಿಗಳ ತೆರವು ಕೆಲಸವನ್ನು ಮಾಡುವುದರ ಮೂಲಕ ಸ್ವಚ್ಚತಾ ಅಭಿಯಾನ ಆರಂಭಿಸಿದರು.

15 ಕಿ.ಮಿ ರಸ್ಥೆಯ  ಇಕ್ಕೆಲಗಳು ಸ್ವಚ್ಚ:

ಅಕ್ಟೋಬರ್ 2 ರಂದು ಚಾರ ಗ್ರಾಮದ ಪ್ರಯಾಣಿಕರ ಬಸ್ ತಂಗುದಾಣವನ್ನು ಸ್ವಚ್ಚಗೊಳಿಸಿ ಅರ್ಥಪೂರ್ಣವಾಗಿ ಗಾಂಧೀ ಜಯಂತಿ ಆಚರಿಸಿದ ಸ್ವಯಂಸೇವಕರು ನಂತರದಲ್ಲಿ ನವೆಂಬರ್ 1 ರ ವರೆಗೆ ಸ್ವಚ್ಚತಾ ಶ್ರಮದಾನವನ್ನು ಮುಂದುವರೆಸುವ ಅಭಿಲಾಷೆ ವ್ಯಕ್ತಪಡಿಸಿ ಸಭೆಯನ್ನು ಕರೆದು ಎಲ್ಲಿ ಶ್ರಮದಾನ ನಡೆಸಬಹುದು? ಯಾವ ಸಮಯದಲ್ಲಿ ನಡೆಸಬೇಕು? ಎನ್ನುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಂಡರು. ಚಾರ ಗ್ರಾಮದ ರಾಘವೇಂದ್ರ ಆಸ್ಪತ್ರೆಯ ಸರ್ಕಲ್ ನಿಂದ ಸುಮಾರು 15 ಕಿಲೋಮೀಟರ್ ದೂರದ ಬೆಳೆಂಜೆ ದೂಪದಕಟ್ಟೆಯ ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತಾ ಕಾರ್ಯ ನಡೆಸುವ ಬಗ್ಗೆ ತೀರ್ಮಾನಿಸಿ ಕೆಲಸ ಆರಂಭಿಸಿರುತ್ತಾರೆ.

ನಿತ್ಯ ಸಾಯಂಕಾಲ ಕೆಲಸ:

ಪ್ರತಿ ದಿನ ಸಂಜೆ 5.30 ಗಂಟೆ ಯಿಂದ 6.30 ರ ವರೆಗೆ ಶ್ರಮದಾನ ನಡೆಸಿದ್ದಾರೆ. ಘಟಕದಲ್ಲಿ ಸದಸ್ಯರು ಹೆಚ್ಚಿನವರು ದಿನಗೂಲಿಗೆ ತೋಟದ ಕೆಲಸಕ್ಕೆ ಹೋಗುವವರು. ಸ್ವ ಉದ್ಯೋಗ ಮಾಡುವವರು, ಕೃಷಿಕರು, ಆಟೋ ಚಾಲಕರು, ವಾಹನ ಚಾಲಕರೂ ಇದ್ದಾರೆ. ಇವರು ಸಾಯಂಕಾಲ ಕೆಲಸ ಮುಗಿಸಿ ಸ್ವಚ್ಚತೆ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಶೌರ್ಯ ಘಟಕದಲ್ಲಿ ಒಟ್ಟು 22 ಸದಸ್ಯರಿದ್ದು ಇದರಲ್ಲಿ ನಿತ್ಯ ಸರಾಸರಿ 15-18 ಮಂದಿ ಪಾಲ್ಗೊಳ್ಳುತ್ತಿದ್ದು ರಸ್ತೆಯುದ್ದಕ್ಕೂ ಸ್ವಚ್ಚತಾ ಕೆಲಸ ಮಾಡಿದ್ದಾರೆ.

ಗ್ರಾಮ ಪಂಚಾಯತಿಯಿಂದ ನೆರವು:

ಆರಿಸಿದ ಕಸವನ್ನು ವಿಲೇವಾರಿ ಮಾಡುವುದು ಸವಾಲಿನ ಸಂಗತಿ. ಇದಕ್ಕಾಗಿ ಸ್ವಯಂಸೇವಕರಿಗೆ ಗ್ರಾಮ ಪಂಚಾಯತಿ ನೆರವಾಗಿದೆ. ಕಸ ಆರಿಸಿ ತೊಟ್ಟೆಯಲ್ಲಿ ಸಂಗ್ರಹಿಸಿ ಇಡುತ್ತಿದ್ದ ಕಸವನ್ನು ಗ್ರಾಮ ಪಂಚಾಯತಿ ಚಾರ ಹಾಗೂ ಗ್ರಾಮ ಪಂಚಾಯತಿ ಕುಚ್ಚೂರು ಇದರ ವತಿಯಿಂದ ವಾಹನವನ್ನು ಕಳುಹಿಸಿ ಕಸ ವಿಲೇವಾರಿ ಮಾಡಿದ್ದಾರೆ.  ಅಲ್ಲದೇ ಸ್ವತಃ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರುಗಳು ಶ್ರಮದಾನದಲ್ಲಿ ಭಾಗವಹಿಸಿ ಸ್ವಯಂಸೇವಕರಿಗೆ ಪ್ರೇರಣೆ ತುಂಬಿದ್ದಾರೆ.

ಸ್ಥಳೀಯರು ಭಾಗಿ:

ಸ್ವಯಂಸೇವಕರು ಸೇವೆಯನ್ನು ಗಮನಿಸಿದ ಸ್ಥಳೀಯರು ಶ್ರಮದಾನದಲ್ಲಿ ಭಾಗವಹಿಸಿ ಸೇವೆ ಸಲ್ಲಿಸಿರುತ್ತಾರೆ. ಅಕ್ಕಪಕ್ಕದ ಅಂಗಡಿಯವರು, ಆಟೋ ಚಾಲಕರು, ದಾರಿ ಹೋಕರು, ಮಕ್ಕಳು ಮತ್ತಿತರರು ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಬಾಟಲ್ ಗಳು, ಪ್ಲಾಸ್ಟಿಕ್ ಕವರ್ ಗಳು ಮತ್ತಿತರ ಪರಿಸರಕ್ಕೆ ಹಾನಿ ಉಂಟುಮಾಡಬಲ್ಲ ವಸ್ತುಗಳನ್ನು ತೆರವುಗೊಳಿಸಿ ತಮ್ಮ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ. ಚಾರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಶೆಟ್ಟಿ, ಕುಚ್ಚೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹೇಶ್ ಶೆಟ್ಟಿ, ಜನಜಾಗೃತಿ ವೇದಿಕೆಯ ಸದಸ್ಯರಾದ ವಾದಿರಾಜ್ ಶೆಟ್ಟಿ, ತಾಲ್ಲೂಕು ಯೋಜನಾಧಿಕಾರಿ ಲೀಲಾವತಿ, ವಲಯ ಮೇಲ್ವಿಚಾರಕರಾದ ರೇವತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿಗಳು, ಶ್ರಮದಾನದಲ್ಲಿ ಭಾಗವಹಿಸಿ ಸ್ವಯಂಸೇವಕರ ಮಹತ್ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ಸ್ವಯಂಸೇವಕರ ಈ ಸೇವೆಯನ್ನು ಗುರುತಿಸಿ ಚಾರ ಹಾಗೂ ಕುಚ್ಚೂರು ಗ್ರಾಮ ಪಂಚಾಯತಿ ಸದಸ್ಯರು ಅಭಿನಂದಿಸಿದ್ದಾರೆ. ಸ್ಥಳೀಯ ಸಂಘಸಂಸ್ಥೆಗಳು, ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ.

ಸಂಯೋಜಕರು, ಸದಾಶಿವ: 9741849455

ಘಟಕ ಪ್ರತಿನಿಧಿ: ಚಂದ್ರ ನಾಯ್ಕ್: 9740121914

Share Article
Previous ಹಾವಿನ ಆತಂಕ ದೂರ ಮಾಡುವ ಮಂಜುನಾಥ

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved