ಕಾರವಾರ: ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಲ್ಲಿ 200  ಹಣ್ಣಿನ ಸಸಿಗಳ ನಾಟಿ.

 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್, ಕಾರವಾರ ಹಾಗೂ ಶ್ರೀ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆ ಸಿದ್ದರ ಇವರ ಸಂಯುಕ್ತ ಆಶ್ರಯದಲ್ಲಿ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.

200 ಸಸಿಗಳನ್ನು ನಾಟಿ ಮಾಡುವ ಮೂಲಕ ಹಸಿರು ಪರಿಸರ ನಿರ್ಮಾಣಕ್ಕೆ ಮಹತ್ವದ ಹೆಜ್ಜೆ ಇಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷರು ಹಾಗೂ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಶ್ರೀಮತಿ ವನಿತಾ ಪಿ. ರಾಣಿ ಅವರು ಮಾತನಾಡಿ, “ಮಂಜುನಾಥ ಸ್ವಾಮಿಯು ಶ್ರೀ ಮಲ್ಲಿಕಾರ್ಜುನ ಸ್ವಾಮಿ  ಸಸಿಗಳ ರೂಪದಲ್ಲಿ ನಮ್ಮ ಬಳಿಗೆ ಬಂದಿದ್ದಾರೆ. ಈ ಸಸಿಗಳನ್ನು ಮಕ್ಕಳಂತೆ ಪೋಷಿಸಿ ಬೆಳೆಸಬೇಕು” ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾದ ಶ್ರೀಯುತ ಕಿರಣ್  ವಲಯ ಅರಣ್ಯಾಧಿಕಾರಿ ಕಾರವಾರ ಇವರು ವನ್ಯಜೀವಿ ಹಾಗೂ ಗಿಡ-ಮರಗಳ ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು.

ಶ್ರೀಮತಿ ನಾಗರತ್ನ ಹೆಗಡೆ, ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನೇಕ ಕಾರ್ಯಕ್ರಮಗಳ ಬಗ್ಗೆ ಮತ್ತು ಅನೇಕ ಸಸಿಗಳ ವಿಧ, ಅವುಗಳ ಪಾಲನೆ ಮತ್ತು ಸಂರಕ್ಷಣೆಯ ಕುರಿತು  ಜವಾಬ್ದಾರಿ ಪಡೆದು ಕೊಳ್ಳುವಂತೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ  ಶ್ರೀ ಕೃಷ್ಣ ಕಾಮತ್, ITI ಕಾಲೇಜಿನ ಪ್ರಾಂಶುಪಾಲರಾದ ಎಸ್.ಬಿ.ಸಾವಂತ್, PU ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಪ್ರಶಾಂತ ರಾಣೆ, ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಪುಂಡಲಿಕ್ ಗಾವ್ಕರ್, ಶ್ರೀ ಪುರ್ಶು ಕೆ. ರಾಣಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರವಾರ ತಾಲೂಕಿನ  ಯೋಜನಾಧಿಕಾರಿಗಳಾದ ಶ್ರೀ ಶಿವರಾಜ್ ಆಚಾರ್ಯ ಅವರು ಪ್ರಾಸ್ತಾವಿಕ ಮಾತನಾಡಿದರು

ಈ ಸಂದರ್ಭದಲ್ಲಿ ಕೃಷಿ ಮೇಲ್ವಿಚಾರಕರು ಕಾರ್ಯಕ್ರಮವನ್ನು ನಿರೂಪಿಸಿದರು ವಲಯ ಮೇಲ್ವಿಚಾರಕರು ಸ್ವಾಗತಿಸಿದರು

 ಸೇವಾಪ್ರತಿನಿಧಿಗಳು ಹಾಗೂ ಶೌರ್ಯ ತಂಡದ ಮಾಸ್ಟರ್ ಕ್ಯಾಪ್ಟನ್ ಎಲ್ಲಾ ಸದಸ್ಯರು  ಕಾರ್ಯಕ್ರಮದಲ್ಲಿ  ಭಾಗವಹಿಸಿ ಎಲ್ಲಾ ಸಸಿಗಳ ನಾಟಿಯನ್ನು ಮಾಡಿದರು

Share Article
Previous ಮಡಿಕೇರಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಾಪೋಕ್ಲು ಶೌರ್ಯ ತಂಡದಿಂದ ಸ್ವಚ್ಚತಾ ಶ್ರಮದಾನ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Canara Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved