ಮಡಿಕೇರಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಾಪೋಕ್ಲು ಶೌರ್ಯ ತಂಡದಿಂದ ಸ್ವಚ್ಚತಾ ಶ್ರಮದಾನ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಡಿಕೇರಿ  ತಾಲ್ಲೂಕಿನ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ನಾಪೋಕ್ಲುವಿನ ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿದರು.

ಗಾಂಥಿ ಜಯಂತಿ ಪ್ರಯುಕ್ತ ಸ್ವಚ್ಚತಾ ಶ್ರಮದಾನಕ್ಕೆ ಸಹಕಾರ ನೀಡುವಂತೆ ಕಾಲೇಜು ಪ್ರಾಂಶುಪಾಲರು ಸ್ವಚ್ಚತಾ ಶ್ರಮದಾನ ನಡೆಸಲು ವಿನಂತಿಸಿಕೊಂಡಿದ್ದರು.

ಮನವಿಗೆ ಸ್ಪಂದಿಸಿದ ಸ್ವಯಂಸೇವಕರು ಕಾಲೇಜು ಆವರಣದಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿರುತ್ತಾರೆ.

ಮಡಿಕೇರಿ ತಾಲ್ಲೂಕು ಸಮಿತಿಯ ಮಾಸ್ಟರ್ ದಿವ್ಯ, ಸ್ವಯಯಂಸೇವಕರಾದ ಉಮಾಲಕ್ಷ್ಮಿ, ಶ್ಯಾಮಲಾ, ಚಂದ್ರಕಲಾ, ರಶ್ಮಿ, ಸೀನ ಮಾಧವನ್, ಶಂಕರ, ದಿಲಿಶ್,ಸುರೇಶ್, ಕೃಷ್ಣ, ಶರವಣ ಶ್ರಮದಾನದಲ್ಲಿ ಭಾಗವಹಿಸಿದರು. ವಲಯ ಮೇಲ್ವಿಚಾರಕರಾದ ಸಂತೋಷ್ ರವರು ಉಪಸ್ಥಿತರಿದ್ದರು.

Share Article
Previous ದೊಡ್ಡಬಳ್ಳಾಪುರ: ಮನೆಯ ಮೇಲ್ಚಾವಣಿ ಹೊದಿಕೆ ಶ್ರಮದಾನ, ಅಣಗಲಾಪುರ ಶೌರ್ಯ ತಂಡದಿಂದ ಸೇವೆ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Canara Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved