ಭಟ್ಕಳ: 100 ಹಣ್ಣಿನ ಗಿಡಗಳ ನಾಟಿ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಭಟ್ಕಳ  ವತಿಯಿಂದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದ ಕಾರ್ಯಕ್ರಮವನ್ನು ಗೊರಟೆ ಪ್ರೌಢಶಾಲೆಯಲ್ಲಿ ನಡೆಸಲಾಯಿತು.

ವಿವಿಧ ಜಾತಿಯ ಹಣ್ಣಿನ ಗಿಡವನ್ನು ನಾಟಿ ಮಾಡುವ ಈ ಕಾರ್ಯಕ್ರಮವನ್ನು ಉತ್ತರ ಕನ್ನಡ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ನಾಗರತ್ನ ಹೆಗಡೆ  ಅವರು ನಾಟಿ ಮಾಡುವ ಮೂಲಕ ಚಾಲನೆ ನೀಡಿದರು.

ಹಿರಿಯ ಪತ್ರಕರ್ತರಾದ ರಾಧಾಕೃಷ್ಣ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿಗಳಾದ ಲತಾ ಬಂಗೇರ ಅವರ ಉಪಸ್ಥಿತಿಯಲ್ಲಿ ಗಿಡ ನಾಟಿ ಮಾಡಲಾಗಿದ್ದು  100 ಹಣ್ಣಿನ ಕಸಿ ಗಿಡಗಳನ್ನು ನಾಟಿ ಮಾಡಲಾಯಿತು.

ಹಣ್ಣಿನ ಗಿಡಗಳಾದ ಚಿಕ್ಕು, ಮಾವು, ಪೇರಲೆ, ರಾಂಬೂಟ, ಲಕ್ಷ್ಮಣ ಫಲ, ರಂಜಲು, ಜಂಬು ನೇರಳೆ ಹೀಗೆ ವಿವಿಧ ಜಾತಿಯ ಹಣ್ಣಿನ ಗಿಡ ನಾಟಿ ಮಾಡಲಾಗಿದೆ.

           ಕಾರ್ಯಕ್ರಮದಲ್ಲಿ ಅನಿತಾ ನಾಯ್ಕ್ ಶಾಲೆಯ ಮುಖ್ಯ ಶಿಕ್ಷಕರು, ರಮೇಶ್ ನಾಯಕ್ ಅಧ್ಯಕ್ಷರು ಪದ್ಮಯ ನಾಯಕ್ ವಿಪತ್ತು ಸಂಯೋಜಕರು ರವಿ ನಾಯ್ಕ್ ನಾಮಧಾರಿ ಸಂಘದ ಅಧ್ಯಕ್ಷರು ಪಾಂಡುರಂಗ ಊರಿನ ಗಣ್ಯರು ಯಮುನಾ ನಾಯ್ಕ ಒಕ್ಕೂಟದ ಅಧ್ಯಕ್ಷರು. ಕೃಷಿ ಮೇಲ್ವಿಚಾರಕರು ಮಹೇಶ್ ಮೇಲ್ವಿಚಾರಕರ ಹರೀಶ್ ಸೇವಾಪ್ರತಿನಿಧಿ ಪ್ರತಿನಿಧಿಗಳು ಸರ್ಪನ ಕಟ್ಟೆ , ಉರುಳಿಸಾಲ ಹೆಬಳೆ  ಶೌರ್ಯ ವಿಪತ್ತು ಘಟಕದ ಸ್ವಯಂಸೇವಕರು ಉಪಸ್ಥಿತರಿದ್ದರು.

Share Article
Previous ಕಾರವಾರ: ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಲ್ಲಿ 200  ಹಣ್ಣಿನ ಸಸಿಗಳ ನಾಟಿ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Canara Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved