ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಿದ್ದಾಪುರ ತಾಲ್ಲೂಕಿನ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ತಾಳಗುಪ್ಪದ ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ರಸ್ತೆ ರಿಪೇರಿ ಶ್ರಮದಾನ ನಡೆಸಿದರು.

ತಾಳಗುಪ್ಪ ಸಮೀಪದ ಕಲ್ಲೋಟ್ಟಿ ಯಿಂದ ಹೆರ್ಕಣಿ ತನಕ ಸುಮಾರು ಒಂದು ಕಿಲೋಮೀಟರ್ ದೂರದ ವರೆಗೆ ರಸ್ತೆಯಲ್ಲಿ ನೀರು ನಿಂತು ಕೆಸರುಗಟ್ಟಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು. ರಸ್ತೆಯಲ್ಲಿ ಬೈಕ್ ಸವಾರರು ಕಷ್ಠಪಡಬೇಕಾಗಿತ್ತು. ಪಾದಾಚಾರಿಗಳಿಗೂ ಸಂಚಾರಕ್ಕೆ ಕಷ್ಠವಾಗುತ್ತಿತ್ತು.
ಮಣ್ಣಿನ ರಸ್ತೆಯಾಗಿದ್ದರಿಂದ ನೀರು ಹರಿದು ಹೋಗಲು ಸರಿಯಾದ ಕಾಲುವೆ ಇಲ್ಲದೇ ಇರುವುದರಿಂದ ರಸ್ತೆಯಲ್ಲಿಯೇ ನೀರು ನಿಂತು ಕೆಸರಾಗುತ್ತಿತ್ತು. ವಾಹನದ ಚಕ್ರ ಜಾರುತ್ತಿದ್ದರಿಂದ ವಾಹನ ಓಡಿಸಲು ಸಾಧ್ಯವಾಗುತ್ತಿರಲಿಲ್ಲ.

ತಾಳಗುಪ್ಪ ಭಾಗದಲ್ಲಿ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿರುವ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡವು ರಸ್ತೆಯ ಬದಿಯಲ್ಲಿ ಕಾಲುವೆ ಮಾಡಿ ನೀರು ನಿಲ್ಲದಂತೆ ಮಾಡಲು ತೀರ್ಮಾನಿಸಿ ಒಂದು ದಿನದ ಶ್ರಮದಾನ ನಡೆಸಿದರು.
ತಾಳಗುಪ್ಪ ಸಮೀಪದ ಕಲ್ಲೋಟ್ಟಿ ಯಿಂದ ಹೆರ್ಕಣಿ ತನಕ ಸುಮಾರು ಒಂದು ಕಿಲೋಮೀಟರ್ ದೂರದ ವರೆಗೆ ರಸ್ತೆಯಲ್ಲಿ ಅಲ್ಲಲ್ಲಿ ಕಲ್ಲುಗಳನ್ನು ಹಾಕಿ ನೀರು ನಿಲ್ಲದಂತೆ ಮಾಡಿ ವಾಹನ ಸವಾರಿ ಸುಲಭವಾಗುವಂತೆ ಮಾಡಿರುತ್ತಾರೆ.

ಶೌರ್ಯ ಘಟಕದ ಸದಸ್ಯರಾದ ಗೋಪಾಲ್ , ಈಶ್ವರ್, ಮಹೇಶ್, ಯೋಗರಾಜ್, ಅಶೋಕ್, ರುಕ್ಮಿಣಿ, ಅಶೋಕ ಆರ್, ಸಂತೋಷ್, ರುಕ್ಮಿಣಿ, ಗಣೇಶ ಇವರು ಶ್ರಮದಾನದಲ್ಲಿ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಘಟಕದ ಮಾಸಿಕ ಸಭೆಯನ್ನು ನಡೆಸಿ ಮುಂಬರುವ ದಿನಗಳಲ್ಲಿ ತಂಡದ ಮೂಲಕ ನಡೆಸಬಹುದಾದ ಚಟುವಟಿಕೆಗಳ ಬಗ್ಗೆ ಚರ್ಚೆ ಮಾಡಲಾಯಿತು.