ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕುಮಟಾ ತಾಲ್ಲೂಕಿನ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಧಾರೇಶ್ವರದ ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ರುದ್ರಭೂಮಿಯಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿದರು.

ಊರಕೇರಿ ಗ್ರಾಮದ ತಲ್ಗೋಡು ಎಂಬಲ್ಲಿ ಶ್ರಮದಾನ ನಡೆಯಿತು. ದಾರಿಯಲ್ಲಿ ಬೆಳೆದಿದ್ದು ಅನಗತ್ಯ ದಟ್ಟ ಗಿಡಗಳನ್ನು ಕಡಿದು, ಮುಳ್ಳು ಪೊದೆಗಳನ್ನು ತೆರವುಗೊಳಿಸಿ ಸ್ವಚ್ಚತೆ ಮಾಡಲಾಯಿತು.

ಘಟಕದ ಸದಸ್ಯರಾದ ಹನುಮಂತ, ವೆಂಕಟೇಶ, ಭಗೀರಥ, ತಿಮ್ಮಪ್ಪ, ಮಂಜುನಾಥ, ಗಣೇಶ. ವಿಕಾಸ. ಜಯ, ವಿದ್ಯಾ, ಚೇತನ್, ಲಕ್ಷ್ಮಣ, ಸುಜಾತ, ಕಲ್ಪನಾ ಭಾಗವಹಿಸಿದರು.