ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಂಕೋಲಾ ತಾಲ್ಲೂಕಿನ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಣಗಿಲ್ ಬೆಳಂಬಾರ ಘಟಕದ ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ಸಮುದ್ರ ತೀರದಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿದರು.

ಅಂಕೋಲಾ ತಾಲ್ಲೂಕಿನ ಹೊನ್ನೆಬೈಲ್ ಬೀಚ್ ಸುತ್ತಮುತ್ತಲು ಬಿದ್ದಿರುವ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯವನ್ನು ತೆರವುಗೊಳಿಸಲು ಶ್ರಮದಾನ ನಡೆಸಿದರು.

ಕಣಗಿಲ್ ಬೆಳೆಂಬರ ಘಟಕದ ಸದಸ್ಯರಾದ ರವೀಂದ್ರ ಅಮಿತ್ ರಾಮಾ ವೆಂಕಟರಮಣ ಪ್ರಿಯಾ ಸೇವಾ ಪ್ರತಿನಿಧಿ ಗೀತಾ ಅವರು ಶ್ರಮದಾನದಲ್ಲಿ ಭಾಗವಹಿಸಿದರು.