ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಾರ್ಕಳ ತಾಲ್ಲೂಕಿನ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಜಗೋಳಿ ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ಶಾಲೆಯಲ್ಲಿ ಕೈತೋಟ ರಚನೆಯ ಶ್ರಮದಾನ ಮಾಡಿದರು.

ಮುಡಾರು ಗ್ರಾಮದ ರಾಮೇರಿಗುತ್ತು ಶಾಲೆಯಲ್ಲಿ ಶ್ರಮದಾನ ನಡೆಯಿತು.

ಸ್ವಯಂಸೇವಕರಾದ ಸುರೇಶ್ ಶೆಟ್ಟಿ, ಸುಧಾಕರ ಆಚಾರ್ಯ, ರಾಜೇಂದ್ರ ಜೈನ್ , ಜಯವರ್ಮ ಜೈನ್, ಪವನಂಜಯ, ವಿಠಲ ಆಚಾರ್ಯ, ಸುಚಿತ್ರಾ, ಸಂದೀಪ್, ಸುನೀಲ್, ಪ್ರಭಾವತಿ ಉಪಸ್ಥಿತರಿದ್ದರು.